ಅತ್ಯಾಚಾರಿಗಳಿಂದ ಪಾರಾಗಲೂ 3ನೇ ಮಹಡಿಯಿಂದ ಜಿಗಿದ ಯುವತಿ – ಸಂಚು ರೂಪಿಸಿದ್ದು ಮತ್ತೊಬ್ಬ ಹೆಣ್ಣಿನ ರೂಪದ ರಾಕ್ಷಸಿ..!
ರಷ್ಯಾ : ರಷ್ಯಾದ ಅಲ್ಟಾಯ್ ನ ಬರ್ನೌಲ್ ನಲ್ಲಿ ನಡೆದಿರುವ ಘಟನೆ ಸ್ಥಳೀಯರನ್ನ ಬೆಚ್ಚಿ ಬೀಳುವಂತೆ ಮಾಡಿದೆ. ಹೆಣ್ಣಿನ ರೂಪದಲ್ಲಿರುವ ರಾಕ್ಷಸಿಯೊಬ್ಬಳು ( 19 ) ಮತ್ತೊಬ್ಬ ಯುವತಿಯ (18) ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಇಬ್ಬರು ಪುರುಷರನ್ನ ಬಿಟ್ಟು ಆಕೆಯ ಮೇಲೆ ಅತ್ಯಾಚಾರವೆಸಗಿಸಿದ್ದಾಳೆ. ಅತ್ಯಾಚಾರಿಗಳ ಹಿಂಸೆ ತಾಳಲಾರದೇ 18 ವರ್ಷದ ಯುವತಿಯು 3ನೇ ಮಹಡಿ ಅಂದ್ರೆ ಸುಮಾರು 30 ಅಡಿ ಎತ್ತರದಿಂದ ಜಿಗಿದಿದ್ದಾಳೆ. ಯುವತಿ ಹಾರಿದ ರಣಸಕ್ಕೆ ಆಕೆಯ ಕಾಲುಗಳಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ಆಕೆಯ ಸ್ಥಿತಿ ತೀವ್ರ ಗಂಭೀರವಾಗಿದೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ
37 ಹಾಗೂ 26 ವರ್ಷದ ಇಬ್ಬರು ಯುವತಿಯ ಮೇಲೆ ಅತ್ಯಾಚಾವೆಸಗಿದ್ದಾರೆ. ಆ ಸ್ಥಳಕ್ಕೆ ಯುವತಿಯನ್ನ ಸಂಚು ಮಾಡಿ ಕರೆದುಕೊಂಡು ಬಂದಿದ್ದದ್ದೂ ಸಹ 19 ವರ್ಷದ ಯುವತಿ. ಸೇಡು ತೀರಿಸಿಕೊಳ್ಳುವ ಸಲುವಾಗಿ ಸಂತ್ರಸ್ತೆಯನ್ನು ಅಪಾರ್ಟ್ ಮೆಂಟ್ ವೊಂದಕ್ಕೆ ಕರೆದೊಯ್ದಿದ್ದಳು. ಆಕೆ ಅಲ್ಲಿಗೆ ಬರುತ್ತಿದ್ದಂತೆ ಈ ಯುವತಿ ಕರೆಸಿಕೊಂಡಿದ್ದ ಆ ಇಬ್ಬರು ಪುರುಷರು ಅತ್ಯಾಚಾರ ನಡೆಸಿದ್ದಾರೆ. ಅವರ ಲೈಂಗಿಕ ಕಿರುಕುಳ ತಾಳಲಾರದೆ ಸಂತ್ರಸ್ತೆ ಮೂರನೇ ಮಹಡಿಯಿಂದ ಜಿಗಿದಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳನ್ನ ಬಂಧಿಸಿ ತನಿಖೆ ಆರಂಭಿಸಿದ್ದಾರೆ.
ಸೆಲ್ಫಿ ಗಂಡಾಂತರ… ರೈಲಿನ LPG ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ಬಾಲಕನಿಗೆ ಕರೆಂಟ್ ಶಾಕ್..!








