ಸೆಲ್ಫಿ ಗಂಡಾಂತರ… ರೈಲಿನ LPG ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ಬಾಲಕನಿಗೆ ಕರೆಂಟ್ ಶಾಕ್..!
ಮಂಗಳೂರು : ರೈಲಿನ LPG ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲ್ವೆ ವಿದ್ಯುತ್ ತಂತಿ ತಗುಲಿ ಬಾಲಕ ಗಂಭೀರಾಗಿ ಗಾಯಗೊಂಡಿರುವ ಘಟನೆ ಮಂಗಳೂರಿನ ಕೆಂಜಾರು ತೋಕೂರು ಬಳಿ ನಡೆದಿದೆ. ಜೋಕಟ್ಟೆ HPCL ಕಾಲೋನಿ ನಿವಾಸಿ ಮಹಮ್ಮದ್ ದಿಶಾನ್ (15) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ನೇಹಿತರೊಂದಿಗೆ ರೈಲ್ವೆ ವ್ಯಾಗನ್ ಬಳಿ ಆಟವಾಡುತ್ತಿದ್ದಾಗ ದಿಶಾನ್ ಸೆಲ್ಫಿ ತೆಗೆಯಲು ಮೇಲೆ ಹೋಗಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ 25 ಸಾವಿರ ವೋಲ್ಟ್ ಇರುವ ವಿದ್ಯುತ್ ತಂತಿ ಕೊಂಚ ತಗುಲಿದೆ. ವಿದ್ಯುತ್ ಶಾಕ್ ಗೆ ದಿಶಾನ್ನ ದೇಹ 50 ಶೇಕಡದಷ್ಟು ಸುಟ್ಟು ಹೋಗಿದೆ .ಅಲ್ಲದೆ, ಟ್ಯಾಂಕರ್ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ.
ಗಮನಿಸಿ : ಏಪ್ರಿಲ್ 25ಕ್ಕೆ ಕೆ-ಸೆಟ್ ಪರೀಕ್ಷೆ
37 ದಿನಗಳಲ್ಲಿ 3 ಬಾರಿ ಡೈವೋರ್ಸ್ ಕೊಟ್ಟು 4ನೇ ಬಾರಿಯೂ ಮತ್ತೆ ಅವಳನ್ನೇ ಮದುವೆಯಾದ..!