14 ವರ್ಷದ ಅಪ್ರಾಪ್ತೆ ಮೇಲೆ ಅಕ್ಕನ ಗಂಡ ಸೇರಿ 12 ಮಂದಿಯಿಂದ ತಿಂಗಳುಗಳ ಕಾಲ ಗ್ಯಾಂಗ್ ರೇಪ್..!
14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಹಲವಾರು ತಿಂಗಳುಗಳ ಕಾಲ ಆಕೆಯ ಅಕ್ಕನ ಗಂಡ ಹಾಗೂ ಆತನ ಸ್ನೇಹಿತರು ಸೇರಿ 12 ಮಂದಿ ನಿರಂತರ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನ ನಮ್ಮಕಲ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಒಟ್ಟು 12 ಜನರನ್ನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯ ದೂರಿನ ಆಧಾರದ ಮೇಲೆ ಕೇಸ್ ದಾಖಲು ಮಾಡಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಅಪ್ರಾಪ್ತೆಯು ಓದನ್ನ ಬಿಟ್ಟು ಅಕ್ಕ ಭಾವನ ಜೊತೆಗೆ ಅವರ ಮನೆಯಲ್ಲಿ ವಾಸಗಿದ್ದಳು. ಅಲ್ಲಿ ಆಕೆಯ ಮೇಲೆ ಚಿನಾರಾಜ್ ಅತ್ಯಾಚಾರವಾಗಿದ್ದಾನೆ. ಬಳಿಕ ಬ್ಲಾಕ್ ಮೇಲ್ ಮಾಡಿ ಮತ್ತೆ ಆತನ ಮೂವರು ಸ್ನೇಹಿತರು ಅತ್ಯಾಚಾರವೆಸಗಿದ್ದಾರೆ. ಬಳಿಕ ಸಂತ್ರಸ್ತೆಯು ಮನೆ ಕೆಲಸಕ್ಕೆ ಹೋಗುತ್ತಿದ್ದಾಗ ಅಲ್ಲಿಯೂ ಮನೆ ಮಾಲೀಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಯಾರಿಗೂ ಹೇಳದಂತೆ ದುಡ್ಡು ಕೊಟ್ಟು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ.
ಬಳಿಕ ಈ ಬಗ್ಗೆ ಅನುಮಾನ ಬಂದು ಗ್ರಾಮಸ್ಥರು ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಂಜಿತಾ ಪ್ರಿಯಾಗೆ ದೂರು ನೀಡಿದ ಬಳಿಕ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಚಿನಾರಾಜ್ , ಕುಮಾರ್ , ವಾಡಿವೇಲ್, ಸುಂದರಮ್ , ಕನ್ನನ್ , ಪನ್ನೀರ್ , ಮೂರ್ತಿ , ಅಭಿ, ಗೋಪಿ, ಶೇಖರ್ , ಶಂಕರ್ ,ಶರವಣ್ ಎಂಬ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.