ಆಂಧ್ರದಲ್ಲಿ ಮನುಕುಲ ತಲೆತಗ್ಗಿಸುವ ಘಟನೆ – 6ರ ಬಾಲಕಿ ಮೇಲೆ ಅತ್ಯಾಚಾರ, ಖಾಸಗಿ ಅಂಗಕ್ಕೆ ಮೆಣಸಿನಕಾಯಿ, ಕಲ್ಲು ತುರುಕಿದ ಪಾಪಿ..!
ಆಂಧ್ರಪ್ರದೇಶ : ಆಂಧ್ರದ ವಿಜಯವಾದಲ್ಲೊಂದು ಮನುಕುಲವೇ ತಲೆತಗ್ಗಿಸುವ ಘಟನೆ ನಡೆದಿದೆ.. 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಕಾಮುಕನೊಬ್ಬ ಆಕೆಯ ಖಾಸಗಿ ಬಾಗಕ್ಕೆ ಮೆಣಸಿನ ಕಾಯಿಗಳು ಹಾಗೂ ಕಲ್ಲುಗಳನ್ನ ತುರುಕಿ ವಿಕೃತಿ ಮೆರೆದಿದ್ದಾನೆ.
ಇಬ್ರಾಹಿಂಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 6 ವರ್ಷದ ಬಾಲಕಿ ಮನೆಯ ಹೊರಗೆ ಆಟವಾಡ್ತಿದ್ದಾಗ ಆಕೆಗೆ ತಿಂಡಿ ನೀಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿಯ್ದು ಅತ್ಯಾಚಾರವೆಸಗಿದ್ದಾನೆ. ಬಾಲಕಿ ಪ್ರಜ್ಞೆ ತಪ್ಪುತ್ತಿದ್ದಂತೆ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಬಾಲಕಿಗೆ ಪ್ರಜ್ಞೆ ಮರಳಿ ಬಂದ ನಂತರ ಆಕೆ ಅಲ್ಲಿಂದ ಮನೆಗೆ ಬಂದಿದ್ದಾಳೆ. ನಂತರ ಪೋಷಕರು ಬಾಲಕಿಯ ಖಾಸಗಿ ಅಂಗದಿಂದ ರಕ್ತ ಬರುವುದನ್ನು ಗಮನಿಸಿ ಗಾಬರಿಗೊಂಡು ಆಕೆಯನ್ನ ಪ್ರಶ್ನಿಸಿದಾಗ ಅಸಲಿ ವಿಚಾರ ಗೊತ್ತಾಗಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆದ್ರೆ ಅತ್ಯಾಚಾರಿ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. ಬಾಲಕಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.