ಆರೋಗ್ಯಕರ ಆಹಾರದಲ್ಲಿ ಹಣ್ಣುಗಳು ಮತ್ತು ಹಣ್ಣಿನ ರಸಗಳು ಕೂಡ ಸೇರಿವೆ. ಪ್ರತಿದಿನ ಹಣ್ಣುಗಳನ್ನು ತಿನ್ನಲು ವೈದ್ಯರು ಶಿಫಾರಸು ಮಾಡುತ್ತಾರೆ.
ಹಣ್ಣುಗಳ ಸೇವನೆಯಿಂದ ಸಿಗುವ ಪ್ರಯೋಜನಗಳು:
ಫೈಬರ್: ಹಣ್ಣುಗಳಲ್ಲಿ ಫೈಬರ್ ಅಧಿಕವಾಗಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಗಟ್ಟುತ್ತದೆ.
ವಿಟಮಿನ್‌ಗಳು ಮತ್ತು ಖನಿಜಗಳು: ಹಣ್ಣುಗಳು ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಂ, ಮತ್ತು ಫೋಲೇಟ್ ಮುಂತಾದ ಪೋಷಕಾಂಶಗಳನ್ನು ಒದಗಿಸುತ್ತವೆ.
ಆಂಟಿಆಕ್ಸಿಡೆಂಟ್ಸ್: ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್ಸ್ ಇದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ತೂಕನಷ್ಟ: ಹಣ್ಣುಗಳಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಹೆಚ್ಚು ಫೈಬರ್ ಇರುವುದರಿಂದ ತೂಕನಷ್ಟಕ್ಕೆ ಸಹಾಯ ಮಾಡುತ್ತದೆ.
ಉತ್ತಮ ಆರೋಗ್ಯಕ್ಕೆ ಸೂಕ್ತವಾದ ಹಣ್ಣುಗಳು:
ಸೇಬು: ಹೃದಯದ ಆರೋಗ್ಯಕ್ಕೆ ಉತ್ತಮ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಬಾಳೆಹಣ್ಣು: ಜೀರ್ಣಕ್ರಿಯೆಗೆ ಸಹಾಯ, ಮಾಡುತ್ತದೆ.
ಪಪ್ಪಾಯಿ: ಮಲಬದ್ಧತೆಯನ್ನು ತಡೆಗಟ್ಟುತ್ತದೆ,ಬಿಳಿರಕ್ತಕಣಗಳನ್ನು ಹೆಚ್ಚಿಸುತ್ತದೆ.
ಕಿತ್ತಳೆ: ವಿಟಮಿನ್ ಸಿ ಅಧಿಕ, ಚರ್ಮ ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮ
ದಾಳಿಂಬೆ: ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ, ಮೂತ್ರಕೋಶ ಸಮಸ್ಯೆ ನಿವಾರಣೆ.
ಪ್ರತಿ ದಿನ ಹಣ್ಣುಗಳ ಸೇವೆನೆ ಹೇಗಿರಬೇಕು
ಪ್ರತಿದಿನ ಹಣ್ಣು ಸೇವನೆ: ದಿನಕ್ಕೆ 1-2 ಹಣ್ಣುಗಳನ್ನು ತಿನ್ನುವುದು ಆರೋಗ್ಯಕರವಾಗಿದೆ.
ಹಣ್ಣುಗಳ ಆಯ್ಕೆ: ನಿಮ್ಮ ಆರೋಗ್ಯದ ಅವಶ್ಯಕತೆಗಳಿಗೆ ಅನುಗುಣವಾಗಿ ಹಣ್ಣುಗಳನ್ನು ಆಯ್ಕೆಮಾಡಿ
ಹಣ್ಣುಗಳ ತಾಜಾ ಸೇವನೆ: ತಾಜಾ ಹಣ್ಣುಗಳನ್ನು ತಿನ್ನುವುದು ಹೆಚ್ಚು ಲಾಭಕಾರಿ, ಹಣ್ಣಿನ ರಸವನ್ನು ಕುಡಿಯುವುದಕ್ಕಿಂತ