ಅಪ್ರಾಪ್ತ ಮಗಳ ಮೇಲೆ ತಮದೆಯಿಂದ ನಿರಂತರ ಅತ್ಯಾಚಾರ – ಮೂಗು ಕಚ್ಚಿ ಹಲ್ಲೆ
ರಾಜಸ್ಥಾನ : 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಸ್ವಂತ ತಂದೆ ªನಿರಂತರ ಅತ್ಯಾಚಾರವರೆಸಗಿ ದೈಹಿಕ ಹಾಗೂ ಮಾನಸಿಕವಾಗಿಯೂ ಚಿತ್ರಹಿಮಸೆ ನೀಡಿರುವ ಘಟನೆ ರಾಜಸ್ತಾನದ ಜೋಧ್ ಪುರದಲ್ಲಿ ನಡೆದಿದೆ. ಅಲ್ಲದೇ ಮಗಳು ತಂದೆಯ ಕೃತ್ಯವನ್ನ ವಿರೊಧಿಸಿದಕ್ಕೆ ಆಕೆಯ ಮೂಗನ್ನೂ ಕಚ್ಚಿ ಮೃಗದಂತೆ ವರ್ತಿಸಿದ್ದಾನೆ. ಪದೇ ಪದೇ ತಂದೆಯ ಕಿರುಕುಳದಿಂದ ಬೇಸತ್ತ ಬಾಲಕಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ. ಪ್ರಕರಣದ ತನಿಖೆ ನಡೆಸಿರುವ ಅಧಿಕಾರಿ ಪರಮೇಶ್ವರಿ ನೀಡಿರುವ ಮಾಹಿತಿಯಂತೆ, 45 ವರ್ಷದ ವ್ಯಕ್ತಿ ಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಾಲಕಿ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ತನ್ನ ಸಂಕಷ್ಟ ಹೇಳಿಕೊಂಡಿದ್ದು, ತಂದೆಯಿಂದಲೇ ಪದೇಪದೇ ಅತ್ಯಾಚಾರಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾಳೆ. ಏಪ್ರಿಲ್ 6 ರಂದು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಬಾಲಕಿ ಕಾರ್ಯಕರ್ತೆಯೊಂದಿಗೆ ಮಾತನಾಡಿದ್ದಾಳೆ. ಬಾಲಕಿಯ ಪೋಷಕರು ಬೇರೆ ಬೇರೆಯಾಗಿದ್ದು, ಆಕೆ ತನ್ನ ತಂದೆ, ಚಿಕ್ಕಪ್ಪ-ಚಿಕ್ಕಮ್ಮ ಮತ್ತು ಅಜ್ಜಿಯೊಂದಿಗೆ ಲೂನಿಯಲ್ಲಿ ವಾಸವಾಗಿದ್ದಾಳೆ.
ಎರಡು ವರ್ಷಗಳ ಹಿಂದೆ ಬಾಲಕಿ 13 ವರ್ಷದವಳಿದ್ದಾಗ ತಂದೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಎರಡು ವರ್ಷಗಳಿಂದ ತಂದೆಯ ಕಿರುಕುಳ ಅನುಭವಿಸುತ್ತಿದ್ದ 15 ವರ್ಷದ ಬಾಲಕಿಯನ್ನು ಆಕೆಯ ತಾತ ರಕ್ಷಿಸಿ ಇನ್ನೊಂದು ಮನೆಯಲ್ಲಿ ಬಿಟ್ಟಿದ್ದರು. ಆದರೆ ಅಲ್ಲಿಗೆ ಆಕೆಯ ಮಾವ ಕಾಮುಕನನ್ನು ಕಳುಹಿಸಿ ಆಕೆಯ ಮೇಲೆ ಮತ್ತೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಬಳಿಕ ಬಾಲಕಿ ತನ್ನ ಕಷ್ಟಗಳನ್ನು ತಾತನ ಬಳಿ ಹೇಳಿಕೊಂಡಿದ್ದು, ತಾತ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ಕೊಡಿಸಿದ್ದಾರೆ. ಇದೀಗ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿ ಮನೆಯಲ್ಲಿ ಬಂಧಿಸಿಟ್ಟಿದ್ದ ಶಾಲಾ ಶಿಕ್ಷಕ..!








