ಮಹಿಳೆಗೆ ಮತ್ತು ಬರುವ ಪಾನೀಯ ನೀಡಿ ಅತ್ಯಾಚಾರ , ವಿಡಿಯೋ ಸೆರೆ , ಹಣಕ್ಕಾಗಿ ಬ್ಲಾಕ್ ಮೇಲ್..!
ಉತ್ತರಪ್ರದೇಶ : ಅಪರಾಧಗಳ ಆಗರ ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳೇ ಮನೆಯಲ್ಲಿರುವಾಗ ಬಂದಿದ್ದು, ಆಕೆಗೆ ಮತ್ತು ಬರುವ ಪಾನೀಯ ನೀಡಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿದ್ದಾನೆ. ಇನ್ನೂ ಆಘಾತಕಾರಿ ವಿಚಾರವೆಂದ್ರೆ ಇದರ ವಿಡಿಯೋ ಮಾಡಿಕೊಂಡಿರುವ ಕಿಡಿಗೇಡಿ ಮಹಿಳೆಯ ಬಳಿ 5 ಲಕ್ಷ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದೇ ಹೋದರೆ ಅಶ್ಲೀ ಫೋಟೋ ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿಯೂ ಧಮ್ಕಿ ಹಾಕಿದ್ದಾನೆ.
ಆದ್ರೆ ಮಹಿಳೆ ಈ ಬಗ್ಗೆ ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬುಲಂದ್ ಶಹರ್ ನರಸೇನಾ ಪ್ರದೇಶದ ನಿವಾಸಿಯಾಗಿರುವ ದಿಗ್ವಿಜಯಸಿಂಗ್ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಪರಿಚಿತನಾಗಿದ್ದ ಆರೋಪಿ ಒಂದು ದಿನ ತನ್ನ ಮನೆಗೆ ಬಂದು ಮತ್ತು ಬರುವ ಆಹಾರ ಪದಾರ್ಥ ನೀಡಿದ್ದ.
ಅದನ್ನು ಸೇವಿಸಿದ ನಂತರ ಪ್ರಜ್ಞೆ ತಪ್ಪಿದ ವೇಳೆಯಲ್ಲಿ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ 5 ಲಕ್ಷ ರೂ. ಕೇಳಿದ್ದಾನೆ. ವಿಡಿಯೋ ಬಹಿರಂಗವಾಗುವ ಭಯದಲ್ಲಿ ಮಹಿಳೆ ದೂರು ನೀಡಿದ್ದಾಳೆ. ತನಿಖೆ ನಡೆಸಲಾಗಿದೆ ಎಂದು ಸಿಟಿ ಕೊಟ್ವಾಲಿ ಠಾಣೆ ಠಾಣಾಧಿಕಾರಿ ಅಖಿಲೇಶ್ ತ್ರಿಪಾಠಿ ಹೇಳಿದ್ದಾರೆ.








