Crime : 4 ವರ್ಷದ ಬಾಲಕಿಗೆ 14 ವರ್ಷದ ಬಾಲಕಿನಿಂದ ಲೈಂಗಿಕ ಕಿರುಕುಳ
ತಮಿಳುನಾಡು : 4 ವರ್ಷದ ಬಾಲಕಿಗೆ 14 ವರ್ಷದ ಬಾಲಕ ಲೈಂಗಿಕ ಕಿರುಕುಳ ನೀಡಿರುವಂತಹ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ಬೆಳಕಿಗೆ ಬಂದಿದೆ.
ತೂತುಕುಡಿಯ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕ ನೆರೆ ಮನೆಯ 4 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಬಾಲಕನಿಗೆ ತಂದೆ ಇಲ್ಲ. ಆದರೆ ಆತ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದು, ಶನಿವಾರ ಬಾಲಕಿ ಹಾಗೂ ಆಕೆಯ ಸಹೋದರ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಆಕೆಯೊಂದಿಗೆ ಆಟವಾಡುವ ನೆಪದಲ್ಲಿ ಆರೋಪಿ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆಕೆಯನ್ನು ಏಕಾಂತವಾಗಿರುವ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
National: ಮಾಜಿ ಪೊಲೀಸ್ ಅಧಿಕಾರಿ ಅರೆಸ್ಟ್
ಬಾಲಕಿಗೆ ತಾಯಿ ಸ್ನಾನ ಮಾಡಿಸುವ ವೇಳೆ ಅವಳ ಸ್ಥಿತಿ ನೋಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ನಂತರ ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ವೇಳೆ ವೈದ್ಯರು ಬಾಲಕಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದನ್ನು ದೃಢಪಡಿಸಿದ್ದಾರೆ.
ಈ ಘಟನೆ ಕುರಿತಂತೆ ಬಾಲಕಿ ತಾಯಿ ವಿಲತ್ತಿಕುಲಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಭಾನುವಾರ ಬಾಲಕನನ್ನು ಪೊಲೀಸರು ಬಂಧಿಸಿದ್ದು, ತಿರುನಲ್ವೇಲಿಯಲ್ಲಿರುವ ಮಕ್ಕಳ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
crime , sexual harrasment









