ಮದುವೆಗೆ ಪೋಷಕರು ಒಪ್ಪಿಲ್ಲ ಅಂತ ಮಸಣದ ದಾರಿ ಹಿಡಿದ ಪ್ರೇಮಿಗಳು..!
ಚೆನ್ನೈ: ಪ್ರೇಮಿಗಳಿಬ್ಬರು ಪೋಷಕರು ತಮ್ಮ ಪ್ರೀತಿಗೆ ವಿರೋಧಿಸಿ ಮದುವೆ ವಿರೋಧ ವ್ಯಕ್ತಪಡಿಸಿದರು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಬೆಂಗಳೂರು ಮೂಲದ ಅಭಿನೇಷ್ (28) ಮತ್ತು ಪಲ್ಲವಿ (22) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳಾಗಿದ್ದಾರೆ. ಮಧ್ಯರಾತ್ರಿ ಅರಸನ್ ಕಾಲೋನಿ ಮುಖ್ಯ ರಸ್ತೆಯಲ್ಲಿ ಜೋಡಿ ಶವಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
ಪ್ರೇಮಿಗಳಿಬ್ಬರು ಎರಡು ವಾರಗಳ ಹಿಂದೆ ಬೆಂಗಳೂರು ತೊರೆದು ಚೆನ್ನೈನಲ್ಲಿರುವ ಅಭಿನೇಷ್ ಸಹೋದರಿ ಮನೆಯಲ್ಲಿ ತಂಗಿದ್ದರು. ಈ ನಡುವೆ ಯುವತಿಯ ಪೋಷಕರು ಬೆಂಗಳೂರಿಗೆ ಹಿಂತಿರುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.








