ONLINE ವಂಚನೆ ತಡೆಗೆ ʼಸಹಾಯವಾಣಿʼ ಸೇವೆ ಆರಂಭ..!
ಭಾರತದ ಡಿಜಿಟಲ್ ಕ್ಷೇತ್ರದಲ್ಲಿ ಪ್ರಾಬಲ್ಯ ಸ್ಥಾಪಿಸಸುತ್ತಿದ್ದಂತೆ, ಆನ್ ಲೈನ್ ವಂಚನೆ ಪ್ರಕರಣಗಳು ಸಹ ಹೆಚ್ಚಾಗ್ತಿವೆ. ಈ ನಿಟ್ಟಿನಲ್ಲಿ ಇಂತಹ ಅಪರಾಧಗಳಿಗೆ ಕಡಿವಾಣ ಹಾಕಲಿಕ್ಕೆ ಹಾಗೂ ಮೋಸ ಹೋದವರು ದೂರು ನೀಡಲು ಸರಿಯಾದ ಅವಕಾಶ ಮಾಡಿಕೊಡಲಿಕ್ಕೆ ಗೃಹ ಸಚಿವಾಲಯವು ಮುಂದಾಗಿದೆ. ಈ ಕಾರ್ಯದಲ್ಲಿ ದೆಹಲಿ ಪೊಲೀಸರ ಸೈಬರ್ ಸೆಲ್ ಕೂಡ ಸಾಥ್ ಕೊಟ್ಟಿದೆ.
ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ 155260 ನಂಬರ್ ಸಹಾಯವಾಣಿ ಪ್ರಾರಂಭಿಸಿದೆ. ಆನ್ಲೈನ್ ವಂಚನೆಗೆ ಬಲಿಯಾಗಿದ್ದರೆ, ತಕ್ಷಣ ಈ ಸಂಖ್ಯೆಗೆ ಕರೆ ಮಾಡಬಹುದು. ಸಹಾಯವಾಣಿ ಆ ಬ್ಯಾಂಕ್ ಅಥವಾ ಇ-ಸೈಟ್ಗಳಿಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿ, ನಿಮ್ಮ ಹಣ ಬೇರೆ ಖಾತೆಗೆ ತಲುಪದಂತೆ ತಡೆ ಹಿಡಿಯುತ್ತದೆ.
ಆನ್ಲೈನ್ ವಂಚನೆ ಘಟನೆಗಳನ್ನು ತಡೆಗಟ್ಟಲು ಗೃಹ ಸಚಿವಾಲಯದ ಸೈಬರ್ ಪೋರ್ಟಲ್ https://cybercrime.gov.in/ ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ 155260 ನಂಬರ್ ಕಳೆದ ನವೆಂಬರ್ ನಲ್ಲಿ ಪ್ರಾಯೋಗಿಕವಾಗಿ ಶುರುವಾಗಿತ್ತು. ಆದರೆ ಈಗ ಇದನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗಿದೆ.