Cristiano Ronaldo ಕ್ರಿಸ್ಟಿಯಾನೊ ರೊನಾಲ್ಡೊ ಪ್ರತಿನಿಧಿಸುವ ಪೋರ್ಚುಗಲ್, FIFA ವಿಶ್ವಕಪ್ 2022 ರ ಕ್ವಾರ್ಟರ್ ಫೈನಲ್ನಲ್ಲಿ ಮೊರಾಕೊ ವಿರುದ್ಧ 0-1ಗೋಲಿನ ಅಂತರದಿಂದ ಹೊರಬಿದ್ದಿದೆ.
ಹೀಗಾಗಿ ಪೋರ್ಚುಗಲ್ ಪರವಾಗಿ ನಿಂತು ವಿಶ್ವಕಪ್ ಗೆಲ್ಲುವ ರೊನಾಲ್ಡೊ ಅವರ ‘ಕನಸು’ ಭಗ್ನಗೊಂಡಿದೆ. ಪಂದ್ಯದ ನಂತರ ರೊನಾಲ್ಡೋ ಕಣ್ಣೀರಿಡುತ್ತ ಮೈದಾನ ತೊರೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ತದನಂತರ 37 ವರ್ಷ ವಯಸ್ಸಿನ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ರೊನಾಲ್ಡೋ ‘ಸಾರ್ವಕಾಲಿಕ ಶ್ರೇಷ್ಠ’ ಆಟಗಾರ ಎಂದು ಶ್ಲಾಘಿಸಿದ್ದಾರೆ. ವಿರಾಟ್, ಕ್ರಿಸ್ಟಿಯಾನೊ ರೊನಾಲ್ಡೊಗೆ ಭಾವನಾತ್ಮಕ ಗೌರವವನ್ನ ಟ್ವೀಟರ್ ನಲ್ಲಿ ಬರೆದಿದ್ದಾರೆ.
ಮೊರಾಕೊ ವಿರುದ್ಧದ ಪೋರ್ಚುಗಲ್ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ರೊನಾಲ್ಡೊ ಅವರನ್ನ ಬೆಂಚ್ ಕಾಯಿಸಲಾಯಿತು. ಆನಂತರ 50 ನೇ ನಿಮಿಷದಲ್ಲಿ ಪರಿಚಯಿಸಲಾಯಿತಾದರೂ , ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.
ಪೋರ್ಚುಗಲ್ ವಿಶ್ವಕಪ್ನಿಂದ ಹೊರಬಿದ್ದ ನಂತರ, ರೊನಾಲ್ಡೊ ತನ್ನ ‘ಕನಸು’ ಮುಗಿದಿದೆ ಎಂದು Instagram ನಲ್ಲಿ ಬರೆದುಕೊಂಡಿದ್ದರು.