ಕೊಡಗಿನ ವಿರಾಜಪೇಟೆಯ ಕಾಫಿ ತೋಡದ ಬಳಿ ಮೊಸಳೆ ಪ್ರತ್ಯಕ್ಷ..!
ಕೊಡಗು: ದಕ್ಷಿಣ ಕೊಡಗಿನ ಭಾಗವಾದ ವಿರಾಜಪೇಟೆ ತಾಲ್ಲೂಕಿನ ನಾಗರಹೊಳೆ ಅರಣ್ಯದಂಚಿನ ಭಾಗದಲ್ಲಿ ಕಾಡಾನೆ, ಹುಲಿ ದಿನನಿತ್ಯ ಉಪಟಳ ನಡುವೆ ಚಿರತೆ, ಕಾಡೆಮ್ಮೆ,ಕಾಡಂದಿ ಇತ್ತೀಚೆಗೆ ಕರಡಿ ಸಹ ಕಾಣಿಸಿಕೊಳ್ತಿದ್ದು,ಗ್ರಾಮಗಳತ್ತ ಧಾವಿಸುತ್ತಿವೆ. ಇದೇ ಆತಂಕದಲ್ಲಿ ಅಲ್ಲಿನ ಜನರು ಭಯದಿಂದ ಬದುಕ್ಕುತ್ತಿರುವ ಬೆನ್ನಲ್ಲೇ ಇದೀಗ ಮೊಸಳೆಯೊಂದು ಪ್ರತ್ಯಕ್ಷವಾಗಿ ಆತಂಕ ಉಂಟು ಮಾಡಿದೆ.
ನಲ್ಲೂರು ಭಾಗದಲ್ಲಿ ರಾಜಾ ಎಂಬುವವರಿಗೆ ಸೇರಿದ ಕಾಫಿ ತೋಟಕ್ಕೆ ತಮ್ಮ ಕೆರೆಯಿಂದ ನೀರು ಹಾಯಿಸಲು ತೆರಳಿದ ಕಾರ್ಮಿಕರಿಗೆ ಮೊಸಳೆ ಪ್ರತ್ಯಕ್ಷವಾಗಿದೆ. ಕೂಡಲೇ ಈ ಬಗ್ಗೆ ಪೂನ್ನಂಪೇಟೆ ಮತ್ತು ತಿತಿಮತಿ ವಲಯ ವಿಭಾದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ತಕ್ಷಣವೇ ರಾಪಿಡ್ ಆಕ್ಷನ್ ಟೀಂ ಸ್ಥಳಕ್ಕೆ ದೌಡಾಯಿಸಿ ಮೂಸಳೆಯನ್ನು ಸೆರೆ ಹಿಡಿದಿದೆ. ಬಳಿಕ ಮೊಸಳೆಯನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿದೆ.