ಬೇಸಿಗೆ ಕಾಲ ಬರುತ್ತಿದ್ದಂತೆ ಬೆಂಗಳೂರಿಗೆ ನೀರಿನ ಅಭಾವ ಕಾಡುವುದು ಹೊಸತೇನಲ್ಲ. ಸಾಮಾನ್ಯ ಜನರ ವಿದ್ಯುತ್, ನೀರಿನ ಬಿಲ್ ಪಾವತಿ ಮಾಡಲು ಒಂದು ದಿನ ತಡವಾದ್ರೆ ಸಾಕು ದಂಡ ಹಾಕ್ತಾರೆ ಇಲ್ಲವೇ ಸಂಪರ್ಕ ಸ್ಥಗಿತ ಮಾಡ್ತಾರೆ. ಆದರೆ ಬಾಯ್ತೆರೆದರೆ ನಾವು ನಷ್ಟದಲ್ಲಿದ್ದೇವೆ ಅಂತ ಹೇಳಿಕೊಳ್ಳುವ ಬೆಂಗಳೂರು ಜಲ ಮಂಡಳಿಗೆ, ಪ್ರಮುಖ ಸರ್ಕಾರಿ ಇಲಾಖೆಗಳೇ ಕೋಟಿ-ಕೋಟಿ ವಾಟರ್ ಬಿಲ್ ಪಾವತಿಯನ್ನು ಬಾಕಿ ಉಳಿಸಿಕೊಂಡಿವೆ. ಅವುಗಳ ಪಟ್ಟಿಯನ್ನು ನೋಡೋದಾದ್ರೆ
೧) ವಾಣಿಜ್ಯ ಇಲಾಖೆ ೪.೭೭ ಕೋಟಿ.
೨) ರಾಜ್ಯ ಸರ್ಕಾರ ೫.೨೫ ಕೋಟಿ.
೩) ಸಕ್ಷಮ ಪ್ರಾಧಿಕಾರ ೧.೨೭ ಕೋಟಿ.
೪) ರಕ್ಷಣಾ ಇಲಾಖೆ ೧.೮೮ ಕೋಟಿ.
೫) ಬಿಬಿಎಂಪಿ ೧೦.೨೫ ಕೋಟಿ.
೬) ಕೈಗಾರಿಕೆಗಳು ೨.೦೦ ಕೋಟಿ.
ಸರ್ಕಾರಿ ಇಲಾಖೆಗಳೇ ಕೋಟಿ ಕೋಟಿ ನೀರಿನ ಬಿಲ್ ಪಾವತಿಸದೆ ಮೋಸ ಮಾಡ್ತಿವೆ. ಸಾಮಾನ್ಯ ಜನ ಈ ತಪ್ಪನ್ನು ಮಾಡಿದ್ದಿದ್ದರೆ ಮಂಡಳಿ ಸುಮ್ಮನೆ ಬಿಡುತ್ತಿತ್ತಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನಮಗೆ ಯುದ್ಧ ಬೇಡ ಶಾಂತಿ ಬೇಕು, ಆದರೆ ಇದು ನಮ್ಮ ಬಲಹೀನತೆಯಲ್ಲ: ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎಚ್ಚರಿಕೆ
ಇಸ್ಲಾಮಾಬಾದ್: ನಮಗೆ ಯುದ್ಧ ಬೇಕಾಗಿಲ್ಲ, ನಾವು ಶಾಂತಿಯನ್ನು ಮಾತ್ರ ಬಯಸುತ್ತೇವೆ. ಆದರೆ, ಶಾಂತಿಗಾಗಿ ನಾವು ಕೈಜೋಡಿಸುತ್ತಿರುವುದನ್ನು ಯಾರೂ ನಮ್ಮ ಬಲಹೀನತೆ ಎಂದು ಭಾವಿಸಬಾರದು ಎಂದು ಪಾಕಿಸ್ತಾನದ ಪ್ರಧಾನಿ...








