ಭಾರತಕ್ಕೆ ತಲೆ ಭಾಗಿದ ಅಮೆರಿಕಾ; ರಷ್ಯಾದೊಂದಿಗೆ ತೈಲ ಖರೀದಿಗೆ ಅಭ್ಯಂತರವಿಲ್ಲ ಎಂದ US
ರಷ್ಯಾ – ಉಕ್ರೇನ್ ನಡುವಿನ ಯುದ್ಧದ ನಂತರ ರಷ್ಯಾದೊಂದಿಗೆ ತೈಲ ಖರೀದಿಸದಂತೆ ಅಮೆರಿಕಾ ಮತ್ತು ಐರೋಪ್ ರಾಷ್ಟ್ರಗಳು ಭಾರತಕ್ಕೆ ಒತ್ತಡ ಏರಿದ್ದವು. ಆದರೇ ಭಾರತ ಒತ್ತಡಕ್ಕೆ ಬಗ್ಗದೆ ತೈಲ ಖರೀದಿಯನ್ನ ಮುಂದುವರೆಸಿತತ್ತು. ವಿದೇಶಾಂಗ ಸಚಿವ ಎಸ್ ಜೈಶಂಕರ್ ತಮ್ಮ ವಾದಗಳಿಂದ ಎಲ್ಲಾ ರಾಷ್ಟ್ರಗಳ ಬಾಯ್ಮುಚ್ಚಿಸಿದ್ದರು.
ಇದೀಗ, ರಷ್ಯಾದೊಂದಿಗೆ ಭಾರತ ತೈಲ ಖರೀದಿಸಲು ನಮ್ಮ ಅಭ್ಯಂತರವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ನಾವು ಯಾವುದೇ ನಿಷೇಧ ಹೇರುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಭಾರತವನ್ನು ನಿಷೇಧಿಸುವ ಯೋಚನೆ ನಮಗಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿನ ಯುರೋಪಿಯನ್ ಮತ್ತು ಯುರೇಷಿಯನ್ ವ್ಯವಹಾರಗಳ ವಿಭಾಗದ ಸಹಾಯಕ ಕಾರ್ಯದರ್ಶಿ ಕರೆನ್ ಡಾನ್ ಫ್ರೈಡ್ ಹೇಳಿದ್ದಾರೆ. ಭಾರತದೊಂದಿಗೆ ಬಾಂಧವ್ಯ ಬಹಳ ಮುಖ್ಯ ಎಂದು ಹೇಳಿದ್ದಾರೆ.
ಭಾರತ ಮತ್ತು ಅಮೆರಿಕದ ನಡುವೆ ನೀತಿ ವಿಭಿನ್ನವಾಗಿರಬಹುದು, ಆದರೆ ನಾವಿಬ್ಬರೂ ಅಂತರರಾಷ್ಟ್ರೀಯ ನಿಯಮಗಳನ್ನು ಅನುಸರಿಸಲು ಬದ್ಧರಾಗಿದ್ದೇವೆ. ನಾವು ದೇಶಗಳ ಸಾರ್ವಭೌಮತ್ವವನ್ನು ಗೌರವಿಸುತ್ತೇವೆ ಎಂದು ಹೇಳಿದರು.
ಕಳೆದ ಕೆಲವು ತಿಂಗಳುಗಳಿಂದ ಭಾರತ ರಷ್ಯಾದಿಂದ ಅಗ್ಗದ ಬೆಲೆ ಕಚ್ಚಾ ತೈಲವನ್ನು ಖರೀದಿಸುತ್ತಿದೆ ಮತ್ತು ಅದನ್ನ ಅಮೆರಿಕ ಮತ್ತು ಯುರೋಪ್ಗೆ ಇಂಧನವಾಗಿ ಪರಿವರ್ತಿಸುತ್ತಿದೆ. ಏಕೆಂದರೆ ಭಾರತದಲ್ಲಿ ಸಂಸ್ಕರಿಸಿದ ತೈಲವನ್ನು ರಷ್ಯಾದ ತೈಲವೆಂದು ಪರಿಗಣಿಸುವುದಿಲ್ಲ. ಕಳೆದ ತಿಂಗಳು, ಭಾರತವೊಂದರಲ್ಲೇ ಪ್ರತಿದಿನ 89,000 ಬ್ಯಾರೆಲ್ ಗ್ಯಾಸೋಲಿನ್ ಮತ್ತು ಡೀಸೆಲ್ ಅನ್ನು ನ್ಯೂಯಾರ್ಕ್ಗೆ ಕಳುಹಿಸಲಾಗಿದೆ.
Crude oil: America is a headache for India; US has no objection to buying oil with Russia