ಥೂ… ಇವಳೇನು ತಾಯಿನೋ ರಾಕ್ಷಿಸಿನೋ..!
ಚೆನ್ನೈ: ತಾಯಂದಿರು ತಮ್ಮ ಮಕ್ಕಳ ರಕ್ಷಣೆಗಾಗಿ ಪ್ರಾಣತ್ಯಕ್ಕೂ ರೆಡಿಯಾಗಿರುತ್ತಾರೆ ಅನ್ನೋದನ್ನ ಕೇಳಿದ್ದೇವೆ. ಆದ್ರೆ ಈ ಮಾತಿಗೆ ಕಳಂಕ ಎಂಬಂತಿದೆ ಇಲ್ಲೊಬ್ಬ ತಾಯಿ ಮಾಡಿರುವ ನೀಚ ಕೃತ್ಯ… ಹೌದು ಚೆನ್ನೈನಲ್ಲಿ ಆಘಾತಕಾರಿ ಘಟನೆ ನಡೆದಿರೋದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ತನ್ನ ಸ್ವಂತ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸಾಥ್ ನೀಡಿದ್ದಾಳೆ. ತನ್ನ ಪ್ರಿಯಕರನಿಂದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಅವಕಾಶ ನೀಡಿದ್ದಾರೆ. ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬುಧವಾರ ಮಡಿಪಕ್ಕಂ ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ದುಡ್ಡು ಮಾಡೋ ಶಾರ್ಟ್ ಕಟ್ : ದಂಪತಿಗೆ ಯಾವ ಗತಿ ಬಂತು ನೋಡಿ..! ಡೇಟಿಂಗ್ ಆಪ್ ಬಗ್ಗೆ ಎಚ್ಚರವಿರಲಿ..!
36 ವರ್ಷದ ಮಹಿಳೆ ಕೆಲವು ವರ್ಷಗಳ ಹಿಂದೆ ಗಂಡನಿಂದ ದೂರವಾಗಿದ್ದು, ಶೋಲಿಂಗನಲ್ಲೂರ್ ನಲ್ಲಿ ವಾಸವಾಗಿದ್ದಾಳೆ. ಬಳಿಕ 32 ವರ್ಷದ ಶೇಖರ್ ಎಂಬಾತನ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಮಹಿಳೆ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ ಶೇಖರ್ ಆಕೆಯ ಹಿರಿಯ ಮಗಳಾಗಿದ್ದ 15 ವರ್ಷ ವರ್ಷದ ಅಪ್ರಾಪ್ತೆಯನ್ನ ಲೈಂಗಿಕವಾಗಿ ಬಳಸಿಕೊಳ್ಳಲು ಆರಂಭಿಸಿದ್ದಾನೆ. ಬಳಿಕ ಈ ಬಗ್ಗೆ ಅಪ್ರಾಪ್ತೆ ತನ್ನ ತಾಯಿಗೆ ತಿಳಿಸಿದ್ದಾಳೆ. ಹೀಗೆ ಹೇಳಿಕೊಂಡಾಗ ತನ್ನ ಪ್ರಿಯಕರನ ಕಪ್ಪಾಳಕ್ಕೆ ಬಾರಿಸಿ ಮಗಳ ನೆರವಿಗೆ ನಿಲ್ಲಬೇಕಿದ್ದ ತಾಯಿ, ತನ್ನ ಪ್ರಿಯಕರನಿಗೆ ಸಹಕರಿಸುವಂತೆ ಮಗಳ ಬಳಿ ಕೇಳಿಕೊಂಡಿದ್ದಾಳೆ.
ಬೆಂಗಳೂರಿಗರಿಗೆ ಶಾಕಿಂಗ್ ನ್ಯೂಸ್ : ಯುಕೆಯಿಂದ ಬೆಂಗಳೂರಿಗೆ ಬಂದ 58 ಜನರು ನಾಪತ್ತೆ..!
ಇದ್ರಿಂದ ಇನ್ನಷ್ಟು ಲಾಭವೇ ಆಗಿದ್ದ ಆತ ಅಪ್ರಾಪ್ತೆ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಳಿಕ ಆ ಬಾಲಕಿ ಗರ್ಭಿಣಿಯಾಗಿದ್ದಾಳೆ. ಮಗಳು ಗರ್ಭಿಣಿಯಾಗ್ತಿದ್ದಂತೆ ಆಕೆಯನ್ನ ಸಹೋದರನ ಮನೆಯಲ್ಲಿ ಬಿಟ್ಟು ಗೆಳೆಯನ ಜೊತೆಗೆ ಈ ನೀಚ ತಾಯಿ ಎಸ್ಕೇಪ್ ಆಗಿದ್ದಾಳೆ. ಇತ್ತ ತಾನು ಗರ್ಭಿಣಿಯಾದ ಬಗ್ಗೆ ಹುಡುಗಿ ತನ್ನ ಮಾವನಿಗೆ ತಿಳಿಸಿದ್ದಾಳೆ. ಬಳಿಕ ಬಳಿಕ ಆಕೆಯ ಮಾವ ಈ ಬಗ್ಗೆ ಮಡಿಪಕ್ಕಂ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಬಾಲಕಿಯನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಬಳಿಕ ಬಾಲಕಿ ಮಗುವಿಗೂ ಜನ್ಮ ನೀಡಿದ್ದಾಳೆ. ಇತ್ತ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಿರಂತರ ಹುಡುಕಾಟದ ನಂತರ ಬಾಲಕಿಯ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಹುಡುಕಿ ಎಳೆತಂದು ಜೈಲಿಗಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








