CSKಗೆ ಆಘಾತ… ಟೂರ್ನಿಯಿಂದ ದೀಪರ್ ಚಹಾರ್ ಔಟ್
ದೀಪಕ್ ಚಹಾರ್ ಐಪಿಎಲ್ 2022 ರ ಸೀಸನ್ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ ಎಂದು ಸಿಎಸ್ಕೆ ಶುಕ್ರವಾರ ಟ್ವಿಟರ್ನಲ್ಲಿ ಅಧಿಕೃತ ಘೋಷಣೆ ಮಾಡಿದೆ.
“ಮಿಸ್ ಯು ದೀಪಕ್ ಚಹಾರ್… ಬೇಗ ಗುಣಮುಖರಾಗಿ” ಎಂದು ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿದೆ. ದೀಪಕ್ ಚಹಾರ್ ನಿರ್ಗಮನ ಸಿಎಸ್ ಕೆ ತಂಡಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ.
ದೀಪಕ್ ಚಹಾರ್ ಕಳೆದ ಋತುವಿನಲ್ಲಿ CSK ತಂಡ ಚಾಂಪಿಯನ್ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸತತ ನಾಲ್ಕು ಪಂದ್ಯಗಳಲ್ಲಿ ಸೋತಿರುವ ಜಡ್ಡು ಸೇನೆ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಗೆದ್ದು ಮೊದಲ ಗೆಲುವು ಸಾಧಿಸಿದೆ.
ಈ ಹಿಂದೆ ತೊಡೆಯ ಸ್ನಾಯುವಿನ ಗಾಯದಿಂದಾಗಿ ವಿಂಡೀಸ್ ಸರಣಿಯನ್ನು ಕಳೆದುಕೊಂಡಿದ್ದ ಚಹಾರ್, NCA ಪುನರ್ವಸತಿಗೆ ಸೇರಿ ಚೇತರಿಸಿಕೊಂಡಿದ್ದರು.
ಆದ್ರೆ ಮತ್ತೆ ಅವರು ಇಂಜೂರಿಯಾಗಿದ್ದು, ನಾಲ್ಕು ತಿಂಗಳು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
ಇದರೊಂದಿಗೆ ಐಪಿಎಲ್ ಜೊತೆಗೆ ಮುಂಬರುವ ಟಿ20 ವಿಶ್ವಕಪ್ನಿಂದ ದೀಪಕ್ ಚಹಾರ್ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. csk-deepak-chahar salam-ruled-out-ipl-2022