CSK | ಯೆಲ್ಲೋ ಬ್ರಿಗೇಡ್ ಗೆ ಜ್ಯೂ.ಮಾಲಿಂಗ csk-junior-lasith-malinga-ipl auction
ಲಸಿತ್ ಮಾಲಿಂಗ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ವಿದೇಶಿ ಕ್ರಿಕೆಟಿಗರಲ್ಲಿ ಒಬ್ಬರು. 12 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಮಾಲಿಂಗ ಪ್ರಮುಖ ಪಾತ್ರ ವಹಿಸಿದ್ದರು. ಮುಂಬೈ ಇಂಡಿಯನ್ಸ್ ಇದುವರೆಗೆ ಐದು ಬಾರಿ ಪ್ರಶಸ್ತಿ ಗೆದ್ದಿದ್ದರೆ, ಮಾಲಿಂಗ ನಾಲ್ಕು ಬಾರಿ ಟೈಟಲ್ ಗೆದ್ದ ತಂಡದಲ್ಲಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಬೌಲಿಂಗ್‌ನಲ್ಲಿ ಮುನ್ನಡೆಸಿದ್ದ ಮಾಲಿಂಗ ಒಟ್ಟಾರೆ 122 ಪಂದ್ಯಗಳಲ್ಲಿ 170 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2020ರಲ್ಲಿ ವೈಯಕ್ತಿಕ ಕಾರಣಗಳಿಗಾಗಿ ಮಾಲಿಂಗ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಈಗ ಮಾಲಿಂಗ ವಿಷಯ ಯಾಕಂದ್ರೆ, ಶ್ರೀಲಂಕಾ ಮೂಲದ 19 ವರ್ಷದ ಹುಡುಗ ಮತಿಶಾ ಪತಿರಾಣಾ, ಜೂನಿಯರ್ ಲಸಿತ್ ಮಾಲಿಂಗ ಎಂಬಂತೆ ಕಾಣಿಸುತ್ತಿದ್ದಾರೆ. ಮಾಲಿಂಗ ಬೌಲಿಂಗ್ ಆ್ಯಕ್ಷನ್ ಅನ್ನು ಅಚ್ಚುಕಟ್ಟಾಗಿ ಬಟ್ಟಿ ಇಳಿಸಿರುವ ಪತಿರಾಣಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಅವರು ಪ್ರಸ್ತುತ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವಿಶ್ವಕಪ್‌ನಲ್ಲಿ ಅವರು ಮೂರು ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಏತನ್ಮಧ್ಯೆ, ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಮತಿಶಾ ಪತಿರಾಣಾ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.
ಮತ್ತೊಂದೆಡೆ, ಪತಿರಾಣಾ ಈಗಾಗಲೇ ಐಪಿಎಲ್ ನಲ್ಲಿ ಭಾಗವಹಿಸಿದ್ದಾರೆ. ಕಳೆದ ವರ್ಷ, ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಮೀಸಲು ಕೋಟಾದಲ್ಲಿ ಮತಿಶಾ ಪತಿರಾಣಾ ಅವರನ್ನು ಕರೆಸಿಕೊಂಡಿತ್ತು. ಈ ವೇಳೆ ಸ್ವತಃ ಎಂ.ಎಸ್.ಧೋನಿಯೇ ಅವರ ಮತಿಶಾ ಬೌಲಿಂಗ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಈ ತಿಂಗಳು 12 ರಂದು ನಡೆಯಲಿರುವ ಮೆಗಾ ಹರಾಜಿಲನಲ್ಲಿ ಧೋನಿ ಅಂಡ್ ಟೀಂ, ಜ್ಯೂನಿಯರ್ ಮಾಲಿಂಗಗೆ ಮಣೆ ಹಾಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.