CSK vs DC Match | ಡೆಲ್ಲಿಗೆ ಓಪನಿಂಗ್ ಸಮಸ್ಯೆ… ಪ್ಲೇಯಿಂಗ್ 11 ಹೇಗಿರಲಿದೆ
ರಿಷಬ್ ಪಂತ್ ನಾಯಕತ್ವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭವಿಷ್ಯ ಇಂದಿನ ಪಂದ್ಯದ ಮೇಲೆ ನಿಂತಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವೊಂದೇ ಮಂತ್ರವಾಗಿದೆ. ಇದು ಈ ಆವೃತ್ತಿಯ 55 ನೇ ಪಂದ್ಯವಾಗಿದ್ದು, ಮುಂಬೈನ ಡಾ.ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದೆ. ಈ ಪೈಕಿ ಐದು ಪಂದ್ಯಗಳಲ್ಲಿ ಗೆದ್ದು, ಐದು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ ಆಫ್ಸ್ ದೃಷ್ಠಿಯಿಂದ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಡೆಲ್ಲಿ ಗೆಲ್ಲಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲಿ ಡೆಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಡೆಲ್ಲಿಗೆ 21 ರನ್ ಗಳ ಜಯ ಸಿಕ್ಕಿದ್ದು, ದೇವಿಡ್ ವಾರ್ನಿರ್ 92 ಮತ್ತು ರೋವ್ ಮನ್ ಪೊವೆಲ್ 67 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಟ್ರ್ಯಾಕ್ ಗೆ ಮರಳಿದ್ದರೂ ಬ್ಯಾಟಿಂಗ್ ವಿಭಾಗದಲ್ಲಿ ಕೊಂಚ ಕೆಲವು ಸಮಸ್ಯೆಗಳಿವೆ. ಆರಂಭಿಕ ಡೇವಿಡ್ ವಾರ್ನರ್ ಒನ್ ಮ್ಯಾಚ್ ಶೋ ಎಂಬಂತೆ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಈ ರೀತಿಯ ಪ್ರದರ್ಶನ ಇನ್ನುಳಿದ ಬ್ಯಾಟರ್ ಗಳಿಂದ ಬರಬೇಕಾಗಿದೆ. ಮುಖ್ಯವಾಗಿ ಮತ್ತೊಬ್ಬ ಆರಂಭಿಕನ ಸಮಸ್ಯೆ ಡೆಲ್ಲಿಗೆ ಕಾಡುತ್ತಿದೆ. ಹೀಗಾಗಿ ಕಳೆದ ಪಂದ್ಯದಲ್ಲಿ ಮನ್ ದೀಪ್ ಸಿಂಗ್ ಗೆ ಅವಕಾಶ ನೀಡಲಾಗಿತ್ತು. ಆದ್ರೆ ಅವರು ಶೂನ್ಯಕ್ಕೆ ಔಟ್ ಆದ್ರೂ ಅವರಿಗೆ ಮತ್ತೊಂದು ಚಾನ್ಸ್ ನೀಡಬಹುದಾಗಿದೆ. ಇಲ್ಲದಿದ್ದರೇ ಯಶ್ ಧೂಳ್ ಗೆ ಅವಕಾಶ ನೀಡಬಹುದು. ಮಿಚೆಲ್ ಮಾರ್ಷ್ ಕೂಡ ಯಾಕೋ ಮಂಕಾಗಿದ್ದಾರೆ. ಆದ್ರೆ ರಿಷಬ್ ಪಂತ್ ನಾಯಕನ ಆಟ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಲಲಿತ್ ಯಾದವ್ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಬೇಕಿದೆ. ರೋವ್ ಮನ್ ಪೊವೆಲ್ ತಂಡದ ಟ್ರಂಪ್ ಕಾರ್ಡ್ ಆಲ್ ರೌಂಡರ್ ಆಗಿದ್ದಾರೆ. ಅಕ್ಷರ್ ಪಟೇಲ್, ಶರ್ದೂಲ್ ಬ್ಯಾಟಿಂಗ್ ನಲ್ಲಿ ಇನ್ನಷ್ಟು ಕಾಣಿಕೆ ನೀಡಬೇಕಾಗಿದೆ.
ಇನ್ನು ಬೌಲಿಂಗ್ ವಿಚಾರಕ್ಕೆ ಬಂದರೇ ಅನ್ರಿಚ್ ತಂಡಕ್ಕೆ ವಾಪಸ್ ಆಗಿರೋದು, ಖಲೀದ್ ಅಹ್ಮದ್ ಫಾರ್ಮ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕುಲ್ ದೀಪ್ ಯಾದವ್ ಬೊಂಬಾಟ್ ಸ್ಪೆಲ್ ಮಾಡುತ್ತಿದ್ದು, ತಂಡಕ್ಕೆ ಬ್ರೇಕ್ ನೀಡುತ್ತಿದ್ದಾರೆ. ಶರ್ದೂಲ್ ಠಾಕೂರ್ ಮಿಡಲ್ ಓವರ್ ನಲ್ಲಿ ವಿಕೆಟ್ ಪಡೆಯುತ್ತಿದ್ದಾರೆ. ಇವರಿಗೆ ಅಕ್ಷರ್ ಪಟೇಲ್ ಸಾಥ್ ನೀಡಬೇಕಿದೆ.
ಪ್ಲೇಯಿಂಗ್ 11
ಮನದೀಪ್ ಸಿಂಗ್ / ಯಶ್ ಧೂಳ್
ಡೇವಿಡ್ ವಾರ್ನರ್
ಮಿಚೆಲ್ ಮಾರ್ಷ್
ರಿಷಭ್ ಪಂತ್ (c & wk)
ಲಲಿತ್ ಯಾದವ್
ರೋವ್ಮನ್ ಪೊವೆಲ್
ಅಕ್ಷರ್ ಪಟೇಲ್
ಶಾರ್ದೂಲ್ ಠಾಕೂರ್
ಕುಲದೀಪ್ ಯಾದವ್
ಅನ್ರಿಚ್ ನಾರ್ಟ್ಜೆ
ಖಲೀಲ್ ಅಹ್ಮದ್
csk-vs-dc-match- delhi capitals Probable XI