CSK vs DC Match | ಸೂಪರ್ ಕಿಂಗ್ಸ್ ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲ್
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ 55ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸವಾಲ್ ಹಾಕಿದೆ. ಮುಂಬೈನ ಡಾ.ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ಲೇ ಆಫ್ಸ್ ರೇಸ್ ನಲ್ಲಿ ಇರಬೇಕಾದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಇತ್ತ ಚೆನ್ನೈ ತಂಡಕ್ಕೆ ಈಗಾಗಲೇ ಪ್ಲೇ ಆಫ್ಸ್ ಹಾದಿ ಮುಚ್ಚಿದ್ದು, ನೇಮಕಾವಸ್ತೆಗೆ ಪಂದ್ಯವನ್ನಾಡುತ್ತಿದೆ. ಆದ್ರೆ ಚೆನ್ನೈ ತಂಡದ ನಾಯಕರಾಗಿರುವ ಧೋನಿ ಗೆಲುವಿನ ಹಿಂದೆ ಬೀಳೋದಂತೂ ನಿಜ.
ಚೆನ್ನೈ ಸೂಪರ್ ಕಿಂಗ್ಸ್ ತಂಡ 15 ನೇ ಆವೃತ್ತಿಯಲ್ಲಿ ಈವರೆಗೂ 10 ಪಂದ್ಯಗಳನ್ನಾಡಿದೆ. ಈ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಏಳು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿದೆ.
ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದೆ. ಈ ಪೈಕಿ ಐದು ಪಂದ್ಯಗಳಲ್ಲಿ ಗೆದ್ದು, ಐದು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಡೆಲ್ಲಿಗೆ 21 ರನ್ ಗಳ ಜಯ ಸಿಕ್ಕಿದ್ದು, ದೇವಿಡ್ ವಾರ್ನಿರ್ 92 ಮತ್ತು ರೋವ್ ಮನ್ ಪೊವೆಲ್ 67 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲು ಕಂಡಿದೆ. ಈ ಪಂದ್ಯದಲ್ಲಿ ಚೆನ್ನೈ 13 ರನ್ ಗಳಿಂದ ಸೋತಿದ್ದು, ಮೊಯಿನ್ ಅಲಿ 34 ರನ್, ಕಾನ್ವೆ 56 ರನ್ ಗಳಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಿಡಲ್ ಆರ್ಡರ್ ನಲ್ಲಿ ಅಸ್ಥಿರತೆ ದೊಡ್ಡ ತಲೆ ನೋವಾಗಿದೆ. ಜಡೇಜಾ ಕ್ಯಾಪ್ಟಿನ್ಸಿಯಲ್ಲಿ ಇದ್ದ ಆರಂಭಿಕರ ಸಮಸ್ಯೆ ಇದೀಗ ಧೋನಿ ನಾಯಕತ್ವದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಡ್ವೇನ್ ಕಾನ್ವೆ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ರುತುರಾಜ್ ಗಾಯಕ್ವಾಡ್ ಕೂಡ ಫಾರ್ಮ್ ಗೆ ಮರಳಿದ್ದಾರೆ. ಆದ್ರೆ ಉತ್ತಪ್ಪ ಆರಂಭದಲ್ಲಿ ತೋರಿದ ಪ್ರದರ್ಶನ ಮರೆತಂತೆ ಇದೆ. ಇನ್ನು ರಾಯುಡು, ಮೊಯಿನ್ ಅಲಿ ಮಿಡಲ್ ಆರ್ಡರ್ ನಲ್ಲಿ ತಂಡಕ್ಕೆ ಬಲ ತುಂಬುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ಧೋನಿ, ಪ್ರಿಟೋರಿಯಸ್ ಮಿಂಚು ಹರಿಸುತ್ತಿದ್ದಾರೆ. ಆದ್ರೆ ರವೀಂದ್ರ ಜಡೇಜಾ ಮೊದಲಿನ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಬೌಲಿಂಗ್ ವಿಚಾರಕ್ಕೆ ಬಂದರೇ ಮುಖೇಶ್ ಚೌಧರಿ, ಮಹೀಶ್ ತೀಕ್ಷಣ ಮ್ಯಾಚ್ ವಿನ್ನಿಂಗ್ ಬೌಲರ್ ಗಳಾಗಿ ಮಿಂಚುತ್ತಿದ್ದಾರೆ. ಮೊಯಿನ್ ಅಲಿ ಕೂಡ ಬೌಲಿಂಗ್ ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇವರಿಗೆ ಪ್ರಿಟೀರಿಯಸ್ ಮತ್ತು ಸಿಮರ್ಜೀತ್ ಸಾಥ್ ನೀಡಬೇಕಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿಚಾರಕ್ಕೆ ಬಂದರೇ
ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಟ್ರ್ಯಾಕ್ ಗೆ ಮರಳಿದ್ದರೂ ಬ್ಯಾಟಿಂಗ್ ವಿಭಾಗದಲ್ಲಿ ಕೊಂಚ ಕೆಲವು ಸಮಸ್ಯೆಗಳಿವೆ. ಆರಂಭಿಕ ಡೇವಿಡ್ ವಾರ್ನರ್ ಒನ್ ಮ್ಯಾಚ್ ಶೋ ಎಂಬಂತೆ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಈ ರೀತಿಯ ಪ್ರದರ್ಶನ ಇನ್ನುಳಿದ ಬ್ಯಾಟರ್ ಗಳಿಂದ ಬರಬೇಕಾಗಿದೆ. ಮುಖ್ಯವಾಗಿ ಮತ್ತೊಬ್ಬ ಆರಂಭಿಕ ಪೃಥ್ವಿ ಶಾ ಜವಾಬ್ದಾರಿ ಅರಿತು ಬ್ಯಾಟ್ ಬೀಸಬೇಕಿದೆ. ಮಿಚೆಲ್ ಮಾರ್ಷ್ ಕೂಡ ಯಾಕೋ ಮಂಕಾಗಿದ್ದಾರೆ. ಆದ್ರೆ ರಿಷಬ್ ಪಂತ್ ನಾಯಕನ ಆಟ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಲಲಿತ್ ಯಾದವ್ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಬೇಕಿದೆ. ರೋವ್ ಮನ್ ಪೊವೆಲ್ ತಂಡದ ಟ್ರಂಪ್ ಕಾರ್ಡ್ ಆಲ್ ರೌಂಡರ್ ಆಗಿದ್ದಾರೆ. ಅಕ್ಷರ್ ಪಟೇಲ್, ಶರ್ದೂಲ್ ಬ್ಯಾಟಿಂಗ್ ನಲ್ಲಿ ಇನ್ನಷ್ಟು ಕಾಣಿಕೆ ನೀಡಬೇಕಾಗಿದೆ.
ಇನ್ನು ಬೌಲಿಂಗ್ ವಿಚಾರಕ್ಕೆ ಬಂದರೇ ಅನ್ರಿಚ್ ತಂಡಕ್ಕೆ ವಾಪಸ್ ಆಗಿರೋದು, ಖಲೀದ್ ಅಹ್ಮದ್ ಫಾರ್ಮ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕುಲ್ ದೀಪ್ ಯಾದವ್ ಬೊಂಬಾಟ್ ಸ್ಪೆಲ್ ಮಾಡುತ್ತಿದ್ದು, ತಂಡಕ್ಕೆ ಬ್ರೇಕ್ ನೀಡುತ್ತಿದ್ದಾರೆ. ಶರ್ದೂಲ್ ಠಾಕೂರ್ ಮಿಡಲ್ ಓವರ್ ನಲ್ಲಿ ವಿಕೆಟ್ ಪಡೆಯುತ್ತಿದ್ದಾರೆ. ಇವರಿಗೆ ಅಕ್ಷರ್ ಪಟೇಲ್ ಸಾಥ್ ನೀಡಬೇಕಿದೆ.
csk-vs-dc-prediction-Chennai Super Kings-Delhi Capitals