ADVERTISEMENT
Saturday, June 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

CSK vs DC Match | ಸೂಪರ್ ಕಿಂಗ್ಸ್ ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲ್

Mahesh M Dhandu by Mahesh M Dhandu
May 8, 2022
in Newsbeat, Sports, ಕ್ರಿಕೆಟ್
CSK vs DC match Head To Head Records saaksha tv

CSK vs DC match Head To Head Records saaksha tv

Share on FacebookShare on TwitterShare on WhatsappShare on Telegram

CSK vs DC Match | ಸೂಪರ್ ಕಿಂಗ್ಸ್ ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲ್

Related posts

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

June 20, 2026
ರಾಮಮಂದಿರ ಹಗರಣ ಆರೋಪ -500 ವರ್ಷ ಕಾದಿದ್ದೀರಿ ಇನ್ನೊಂದು 15 ದಿನ ಕಾಯಿರಿ:ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ಧರ್ಮೋಪದೇಶ ಮಾಡುತ್ತಿದ್ದಾರೆ ಕಾಂಗ್ರೆಸ್ ಮತ್ತು ಎಸ್‌ಪಿ ವಿರುದ್ಧ ಯೋಗಿ ಆಕ್ರೋಶ

ರಾಮಮಂದಿರ ಹಗರಣ ಆರೋಪ -500 ವರ್ಷ ಕಾದಿದ್ದೀರಿ ಇನ್ನೊಂದು 15 ದಿನ ಕಾಯಿರಿ:ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ಧರ್ಮೋಪದೇಶ ಮಾಡುತ್ತಿದ್ದಾರೆ ಕಾಂಗ್ರೆಸ್ ಮತ್ತು ಎಸ್‌ಪಿ ವಿರುದ್ಧ ಯೋಗಿ ಆಕ್ರೋಶ

June 20, 2026

15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ 55ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸವಾಲ್ ಹಾಕಿದೆ. ಮುಂಬೈನ ಡಾ.ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ಲೇ ಆಫ್ಸ್ ರೇಸ್ ನಲ್ಲಿ ಇರಬೇಕಾದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಇತ್ತ ಚೆನ್ನೈ ತಂಡಕ್ಕೆ  ಈಗಾಗಲೇ ಪ್ಲೇ ಆಫ್ಸ್ ಹಾದಿ ಮುಚ್ಚಿದ್ದು, ನೇಮಕಾವಸ್ತೆಗೆ ಪಂದ್ಯವನ್ನಾಡುತ್ತಿದೆ. ಆದ್ರೆ ಚೆನ್ನೈ ತಂಡದ ನಾಯಕರಾಗಿರುವ ಧೋನಿ ಗೆಲುವಿನ ಹಿಂದೆ ಬೀಳೋದಂತೂ ನಿಜ.

ಚೆನ್ನೈ ಸೂಪರ್ ಕಿಂಗ್ಸ್ ತಂಡ 15 ನೇ ಆವೃತ್ತಿಯಲ್ಲಿ ಈವರೆಗೂ 10 ಪಂದ್ಯಗಳನ್ನಾಡಿದೆ. ಈ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಏಳು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿದೆ.

ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದೆ. ಈ ಪೈಕಿ ಐದು ಪಂದ್ಯಗಳಲ್ಲಿ ಗೆದ್ದು, ಐದು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಡೆಲ್ಲಿಗೆ 21 ರನ್ ಗಳ ಜಯ ಸಿಕ್ಕಿದ್ದು, ದೇವಿಡ್ ವಾರ್ನಿರ್ 92 ಮತ್ತು ರೋವ್ ಮನ್ ಪೊವೆಲ್ 67 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲು ಕಂಡಿದೆ. ಈ ಪಂದ್ಯದಲ್ಲಿ ಚೆನ್ನೈ 13 ರನ್ ಗಳಿಂದ ಸೋತಿದ್ದು, ಮೊಯಿನ್ ಅಲಿ  34 ರನ್, ಕಾನ್ವೆ 56 ರನ್ ಗಳಿಸಿದ್ದರು.

csk-vs-dc-prediction-chennai-super-kings-delhi-capitals saaksha tv
csk-vs-dc-prediction-chennai-super-kings-delhi-capitals saaksha tv

ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಿಡಲ್ ಆರ್ಡರ್ ನಲ್ಲಿ ಅಸ್ಥಿರತೆ ದೊಡ್ಡ ತಲೆ ನೋವಾಗಿದೆ. ಜಡೇಜಾ ಕ್ಯಾಪ್ಟಿನ್ಸಿಯಲ್ಲಿ ಇದ್ದ ಆರಂಭಿಕರ ಸಮಸ್ಯೆ ಇದೀಗ ಧೋನಿ ನಾಯಕತ್ವದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಡ್ವೇನ್ ಕಾನ್ವೆ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ರುತುರಾಜ್ ಗಾಯಕ್ವಾಡ್ ಕೂಡ ಫಾರ್ಮ್ ಗೆ ಮರಳಿದ್ದಾರೆ. ಆದ್ರೆ ಉತ್ತಪ್ಪ ಆರಂಭದಲ್ಲಿ ತೋರಿದ ಪ್ರದರ್ಶನ ಮರೆತಂತೆ ಇದೆ. ಇನ್ನು ರಾಯುಡು, ಮೊಯಿನ್ ಅಲಿ ಮಿಡಲ್ ಆರ್ಡರ್ ನಲ್ಲಿ ತಂಡಕ್ಕೆ ಬಲ ತುಂಬುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ಧೋನಿ, ಪ್ರಿಟೋರಿಯಸ್ ಮಿಂಚು ಹರಿಸುತ್ತಿದ್ದಾರೆ. ಆದ್ರೆ ರವೀಂದ್ರ ಜಡೇಜಾ ಮೊದಲಿನ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಬೌಲಿಂಗ್ ವಿಚಾರಕ್ಕೆ ಬಂದರೇ ಮುಖೇಶ್ ಚೌಧರಿ, ಮಹೀಶ್ ತೀಕ್ಷಣ ಮ್ಯಾಚ್ ವಿನ್ನಿಂಗ್ ಬೌಲರ್ ಗಳಾಗಿ ಮಿಂಚುತ್ತಿದ್ದಾರೆ. ಮೊಯಿನ್ ಅಲಿ ಕೂಡ ಬೌಲಿಂಗ್ ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇವರಿಗೆ ಪ್ರಿಟೀರಿಯಸ್ ಮತ್ತು ಸಿಮರ್ಜೀತ್ ಸಾಥ್ ನೀಡಬೇಕಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿಚಾರಕ್ಕೆ ಬಂದರೇ

ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಟ್ರ್ಯಾಕ್ ಗೆ ಮರಳಿದ್ದರೂ ಬ್ಯಾಟಿಂಗ್ ವಿಭಾಗದಲ್ಲಿ ಕೊಂಚ ಕೆಲವು ಸಮಸ್ಯೆಗಳಿವೆ. ಆರಂಭಿಕ ಡೇವಿಡ್ ವಾರ್ನರ್ ಒನ್ ಮ್ಯಾಚ್ ಶೋ ಎಂಬಂತೆ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಈ ರೀತಿಯ ಪ್ರದರ್ಶನ ಇನ್ನುಳಿದ ಬ್ಯಾಟರ್ ಗಳಿಂದ ಬರಬೇಕಾಗಿದೆ. ಮುಖ್ಯವಾಗಿ ಮತ್ತೊಬ್ಬ ಆರಂಭಿಕ ಪೃಥ್ವಿ ಶಾ ಜವಾಬ್ದಾರಿ ಅರಿತು ಬ್ಯಾಟ್ ಬೀಸಬೇಕಿದೆ. ಮಿಚೆಲ್ ಮಾರ್ಷ್ ಕೂಡ ಯಾಕೋ ಮಂಕಾಗಿದ್ದಾರೆ. ಆದ್ರೆ ರಿಷಬ್ ಪಂತ್ ನಾಯಕನ ಆಟ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಲಲಿತ್ ಯಾದವ್ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಬೇಕಿದೆ. ರೋವ್ ಮನ್ ಪೊವೆಲ್ ತಂಡದ ಟ್ರಂಪ್ ಕಾರ್ಡ್ ಆಲ್ ರೌಂಡರ್ ಆಗಿದ್ದಾರೆ. ಅಕ್ಷರ್ ಪಟೇಲ್, ಶರ್ದೂಲ್ ಬ್ಯಾಟಿಂಗ್ ನಲ್ಲಿ ಇನ್ನಷ್ಟು  ಕಾಣಿಕೆ ನೀಡಬೇಕಾಗಿದೆ.

ಇನ್ನು ಬೌಲಿಂಗ್ ವಿಚಾರಕ್ಕೆ ಬಂದರೇ ಅನ್ರಿಚ್ ತಂಡಕ್ಕೆ ವಾಪಸ್ ಆಗಿರೋದು, ಖಲೀದ್ ಅಹ್ಮದ್ ಫಾರ್ಮ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕುಲ್ ದೀಪ್ ಯಾದವ್ ಬೊಂಬಾಟ್ ಸ್ಪೆಲ್ ಮಾಡುತ್ತಿದ್ದು, ತಂಡಕ್ಕೆ ಬ್ರೇಕ್ ನೀಡುತ್ತಿದ್ದಾರೆ. ಶರ್ದೂಲ್ ಠಾಕೂರ್ ಮಿಡಲ್ ಓವರ್ ನಲ್ಲಿ ವಿಕೆಟ್ ಪಡೆಯುತ್ತಿದ್ದಾರೆ. ಇವರಿಗೆ ಅಕ್ಷರ್ ಪಟೇಲ್ ಸಾಥ್ ನೀಡಬೇಕಿದೆ.

csk-vs-dc-prediction-Chennai Super Kings-Delhi Capitals

Tags: #Saaksha TVchennai super kingscsk-vs-dcdelhi capitals
ShareTweetSendShare
Join us on:

Related Posts

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

by admin
June 20, 2026
0

ಜೂನ್ 21ರಿಂದ ಜುಲೈ 10ರವರೆಗೆ ವಾಹನ ಸವಾರರಿಗೆ ಸುವರ್ಣಾವಕಾಶ ರಾಜ್ಯದ ವಾಹನ ಸವಾರರಿಗೆ ಮತ್ತೊಮ್ಮೆ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಬಾಕಿ ಉಳಿದಿರುವ ಟ್ರಾಫಿಕ್ ಇ-ಚಲನ್‌ಗಳನ್ನು ಪಾವತಿಸಲು...

ರಾಮಮಂದಿರ ಹಗರಣ ಆರೋಪ -500 ವರ್ಷ ಕಾದಿದ್ದೀರಿ ಇನ್ನೊಂದು 15 ದಿನ ಕಾಯಿರಿ:ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ಧರ್ಮೋಪದೇಶ ಮಾಡುತ್ತಿದ್ದಾರೆ ಕಾಂಗ್ರೆಸ್ ಮತ್ತು ಎಸ್‌ಪಿ ವಿರುದ್ಧ ಯೋಗಿ ಆಕ್ರೋಶ

ರಾಮಮಂದಿರ ಹಗರಣ ಆರೋಪ -500 ವರ್ಷ ಕಾದಿದ್ದೀರಿ ಇನ್ನೊಂದು 15 ದಿನ ಕಾಯಿರಿ:ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ಧರ್ಮೋಪದೇಶ ಮಾಡುತ್ತಿದ್ದಾರೆ ಕಾಂಗ್ರೆಸ್ ಮತ್ತು ಎಸ್‌ಪಿ ವಿರುದ್ಧ ಯೋಗಿ ಆಕ್ರೋಶ

by Shwetha
June 20, 2026
0

ಅಯೋಧ್ಯಾ ರಾಮಮಂದಿರ ದೇಣಿಗೆ ವಿಚಾರದಲ್ಲಿ ಕೇಳಿಬರುತ್ತಿರುವ ಹಗರಣದ ಆರೋಪಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರೋಧ ಪಕ್ಷಗಳ ವಿರುದ್ಧ ಅಬ್ಬರಿಸಿದ್ದಾರೆ. ಅಯೋಧ್ಯೆಯ ಅಭಿವೃದ್ಧಿಯನ್ನು ಸಹಿಸಲಾಗದ...

ಕಚ್ಚಾ ತೈಲ ಬೆಲೆ ಕುಸಿತ; ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ನಿರೀಕ್ಷೆ?

ಕಚ್ಚಾ ತೈಲ ಬೆಲೆ ಕುಸಿತ; ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ನಿರೀಕ್ಷೆ?

by Shwetha
June 20, 2026
0

ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಕಚ್ಚಾ ತೈಲ ಬೆಲೆಗಳ ಇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ...

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

BJP-JDS ನಾಯಕತ್ವ ವಿಫಲವಾಗಿದೆ; MLC ಚುನಾವಣೆಯ ಬಳಿಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
June 20, 2026
0

MLC ಚುನಾವಣೆಯ ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ, BJP-JDS ಮೈತ್ರಿ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. BJP-JDS ಮೈತ್ರಿಯ 11...

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ಮೀರ್ ಸಾದಿಕ್ ಗಳಿಗೆ ನಡುಕ ತಂದ ವಿಜಯೇಂದ್ರ : ಅಡ್ಡ ಮತದಾನ ಮಾಡಿದ ದ್ರೋಹಿಗಳ ವಿರುದ್ಧ ಕೆಂಡಾಮಂಡಲರಾದ ಬಿಜೆಪಿ ಸಾರಥಿ

by Shwetha
June 20, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಈಗ ಅಡ್ಡ ಮತದಾನದ ಕಿಚ್ಚು ಹತ್ತಿಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram