CSK vs RR : ಟಾಸ್ ಗೆದ್ದ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ
15ನೇ ಆವೃತ್ತಿಯ ಐಪಿಎಲ್ನ 68ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ.
ಬ್ರಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಈ ಸೀಸನ್ನ ಕಡೆಯ ಪಂದ್ಯ ಇದಾಗಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಎಂ.ಎಸ್. ಧೋನಿ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಕೊನೆ ಲೀಗ್ ಪಂದ್ಯಕ್ಕಾಗಿ ಏಕೈಕ ಬದಲಾವಣೆ ಮಾಡಿಕೊಂಡಿರುವ ಸಿಎಸ್ಕೆ ತಂಡದಲ್ಲಿ ಶಿವಂ ದುಬೆ ಸ್ಥಾನಕ್ಕೆ ಅಂಬಟಿ ರಾಯುಡು ಆಡಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಇಂದಿನ ಪಂದ್ಯಕ್ಕೆ ಏಕೈಕ ಬದಲಾವಣೆ ಮಾಡಿಕೊಂಡಿದ್ದು, ಜಿಮ್ಮಿ ನೀಶಮ್ ಬದಲಿಗೆ ಶಿಮ್ರಾನ್ ಹೆಟ್ಮಾಯರ್ ತಂಡಕ್ಕೆ ಮರಳಿದ್ದಾರೆ.

ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡ್ವೇನ್ ಕಾನ್ವೆ, ಮೊಯಿನ್ ಅಲಿ, ಅಂಬಟಿ ರಾಯುಡು, ಎನ್.ಜಗದೀಸನ್, ಎಂ.ಎಸ್.ಧೋನಿ (ನಾಯಕ), ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಮತೀಶ ಪತೀರಣ, ಮುಖೇಶ್ ಚೌಧರಿ
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ಸಂಜೂ ಸ್ಯಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮಾಯೆರ್, ರಿಯಾನ್ ಪರಾಗ್, ಆರ್. ಅಶ್ವಿನ್, ಟ್ರೆಂಟ್ ಬೋಲ್ಟ್, ಪ್ರಸಿದ್ಧ ಕೃಷ್ಣ, ಯುಜುವೇಂದ್ರ ಚಹಲ್, ಒಬೆಡ್ ಮೆಕಾಯ್