CSRV : ಭಾರತೀಯ ಸೈನಿಕರಿಗಾಗಿ ಬುಲೆಟ್ ಫ್ರೂಫ್ ಬುಲ್ಡೋಜರ್ ಗಳು ರೆಡಿ…
ಭಯೋತ್ಪಾದಕರ ಮೇಲಿನ ಕಾರ್ಯಚರಣೆಗೆಂದೆ ಸಿ ಆರ್ ಪಿ ಎಫ್ ವಿಶೇಷ ಬುಲ್ಡೋಜರ್ ಒಂದನ್ನ ತಯಾರು ಮಾಡಿದೆ ಅದಕ್ಕೆ ಕ್ರೈಸಿಸ್ ಸಿಚುಯೇಶನ್ ರೆಸ್ಪಾನ್ಸ್ ವೆಹಿಕಲ್ ಅಥವಾ CSRV ಎಂದು ಹೆಸರಿಡಲಾಗಿದೆ. ಈ ಬುಲೆಟ್ ಫ್ರೂಫ್ ಮತ್ತು ಬಾಂಬ್ ನಿರೋಧಕ ಬುಲ್ಡೋಜರ್ ಗಳು ಮನೆಯೊಳಗೆ ಅಡಗಿಕೊಂಡಿರುವ ಉಗ್ರರ ಮೇಲೆ ದಾಳಿ ಮಾಡಲು ಸಹಾಯ ಮಾಡಲಿವೆ.
ಉನ್ನತ ತಂತ್ರಜ್ಞಾನವನ್ನ ಹೊಂದಿರುವ ಬುಲ್ಡೋಜರ್ ಗಳು ಸೈನಿಕರನ್ನ ರಕ್ಷಿಸಲು ಬಂಕರ್ ಸೌಲಭ್ಯವನ್ನ ಸಹ ಹೊಂದಿವೆ. ಜಮ್ಮು ಕಾಶ್ಮೀರದ ಸೈನಿಕರಿಗೆ ಈ ಬುಲ್ಡೋಜರ್ ಗಳು ಲಭ್ಯವಾಗಲಿವೆ. ಈ ಬುಲ್ಡೋಜರ್‌ಗಳನ್ನು ಆಂಟಿ-ಟೆರರ್ ಬುಲ್ಡೋಜರ್‌ಗಳು ಎಂದು ಹೆಸರಿಡಲಾಗಿದೆ. ಎರಡು ರೀತಿಯ ಸಿಎಸ್‌ಆರ್‌ವಿಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಗೆ ಹಸ್ತಾಂತರಿಸಲಾಗಿದೆ. ಒಂದು ದೊಡ್ಡ ಮತ್ತು ಒಂದು ಸಣ್ಣ ಬುಲ್ಡೋಜರ್ ರೆಡಿ ಮಾಡಲಾಗಿದ್ದು, ಸಣ್ಣ ಬುಲ್ಡೋಜರ್ ಗಳು ಸಣ್ಣ ಸಣ್ಣ ಗಲ್ಲಿಯಲ್ಲಿಯೂ ನುಗ್ಗಲಿವೆ.
ಈ ಗಾಡಿ ನಾಲ್ಕು ಜನ ಸೈನಿಕರು ಒಬ್ಬ ಕಮಾಂಡರ್ ಮತ್ತು ಆಪರೇಟರ್ ಗೆ ಅವಕಾಶ ಕಲ್ಪಿಸುತ್ತದೆ. ವೈಹಿಕಲ್ ನಲ್ಲಿ ಗುಂಡಿನ ದಾಳಿ ನಡೆಸಲು 180 ರಿಂದ 360 ಡಿಗ್ರಿ ಸುತ್ತುವ ರೀತಿ ಮಾರ್ಪಡಿಸಲಾಗಿದ್ದು 18 ರಿಂದ 20 ಅಡಿ ಎತ್ತರಕ್ಕೆ ಲಿಫ್ಟ್ ಮಾಡಲಿದೆ. ಇದರ ಜೊತೆಗೆ ನೈಟ್ ಕ್ಯಾಮರಾ, ಥರ್ಮಲ್ ಕ್ಯಾಮರ ಸಹ ಅಳವಡಿಸಲಾಗಿದೆ. ಈ ಬುಲ್ಡೋಜರ್ ಗೆ ಟೈರ್ ಗಳಿಲ್ಲ. ಟ್ಯಾಂಟ್ ಚೈನ್ ರೀತಿ ವ್ಯವಸ್ಥೆ ಇದೆ.
CSRV : Bulletproof bulldozers ready for Indian soldiers…