ಬಿಜೆಪಿ ಎಂಎಲ್ಸಿ ಸಿಟಿ ರವಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷಮೆ ಅವಶ್ಯಕತೆ ಇಲ್ಲವೆಂದು ಹೇಳಿದ್ದಾರೆ. ಅವರು, “ನಾನು ನೀಡಿದ ದೂರು ದಾಖಲಿಸಲು 15 ದಿನ ಸಮಯ ಇದೆ, ಆದರೆ ನನ್ನ ವಿರುದ್ಧ ಕೆಲವೇ ಕ್ಷಣಗಳಲ್ಲಿ ದೂರು ದಾಖಲು ಮಾಡುತ್ತಾರೆ,” ಎಂದು ಆರೋಪಿಸಿದ್ದಾರೆ. ಸಿಟಿ ರವಿ, “ನಾನು ಹೆಸರನ್ನು ಹಾಕಿ ದೂರು ನೀಡಿದ್ದೇನೆ. ಎಲ್ಲರಿಗೂ ಒಂದೇ ಕಾನೂನು ಇರಬೇಕು,” ಎಂದು ಹೇಳಿದ್ದಾರೆ. ಅವರು, “ನಾನು ಹೋರಾಟದಿಂದ ಬಂದವನು, ಯಾವುದಕ್ಕೂ ಹೆದರುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ. ಸಿಟಿ ರವಿ, “ಬೆಳಗಾವಿ ಪೊಲೀಸ್ ಕಮಿಷನರ್, ಎಸ್ಪಿ, ಗ್ರಾಮಾಂತರ ಎಸ್ಪಿ, DYSP ಸೇರಿದಂತೆ ಅವತ್ತು ರಾತ್ರಿ ಇದ್ದ ಪೊಲೀಸರ ಮೇಲೆ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ,” ಎಂದು ಎಚ್ಚರಿಸಿದ್ದಾರೆ. “ಇದಕ್ಕೆಲ್ಲ ನಿರ್ದೇಶನ ಯಾರು ನೀಡಿದ್ರು ಎಂಬುದು ತನಿಖೆಯಿಂದ ಗೊತ್ತಾಗುತ್ತದೆ,” ಎಂದು ಅವರು ಹೇಳಿದ್ದಾರೆ.
ಭಾರತೀಯ ರೈಲ್ವೆ ಗ್ರೂಪ್ ಡಿ ನೇಮಕಾತಿ – 2024: 50,000+ ಹುದ್ದೆಗಳು
SSLC ಹಾಗೂ ITI ಪಾಸಾದವರಿಗೆ ಇಲ್ಲಿದೆ ಭರ್ಜರಿ ಉದ್ಯೋಗವಕಾಶ. ಭಾರತೀಯ ರೈಲ್ವೆ 50,000 ಕ್ಕೂ ಹೆಚ್ಚು ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಹುದ್ದೆಗಳ ವಿವರಗಳು:...