ಸಿದ್ದರಾಮಯ್ಯ ನೀವು ಸೋನಿಯಾ ಅವರ ಗುಲಾಮರಾಗಿದ್ದೀರಿ : ಸಿ.ಟಿ ರವಿ ಟಾಂಗ್
ತುಮಕೂರು: ಕರ್ನಾಟಕದಲ್ಲಿ ಕನ್ನಡವೇ ಸರ್ವಶ್ರೇಷ್ಠವಾಗಿದೆ. ಇದರಲ್ಲಿ ಗುಲಾಮರಾಗುವ ಪ್ರಶ್ನೆ ಏನ್ಬಂತು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಹಿಂದಿ ಭಾಷೆ ವಿಚಾರದಲ್ಲಿ ಅಮಿತ್ ಷಾ ಗುಲಾಮರಾಗ ಬೇಡಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಅವರಿಗೆ ಹೇಳ ಬಯಸುತ್ತೇನೆ, ನೀವು ಸೋನಿಯಾ ಅವರ ಗುಲಾಮರಾಗಿದ್ದೀರಿ. ಅಮಿತ್ ಷಾ ನಮ್ಮ ನಾಯಕರು, ನಾವು ಅವರ ಕಾರ್ಯಕರ್ತರು ಅಷ್ಟೆ. ನೀವು ಅವರ ಗುಲಾಮರಂತೆ ವರ್ತಿಸುತ್ತಿದ್ದೀರಿ ಎಂದು ಕಿಡಿಕಾರಿದರು.
ಅಲ್ಲದೇ ಆಯಾಯಾ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಕೊಡಬೇಕು ಎಂದು ನೂತನ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಇದು ಅಪರಾಧವಾ, ಗುಲಾಮರಾಗುವ ಅಂಶನಾ, ಯಾವುದಿದೆ ಗುಲಾಮರಾಗುವ ಅಂಶ.ಉನ್ನತ ಶಿಕ್ಷಣವನ್ನು ಕೂಡ ಮಾತೃ ಭಾಷೆಯಲ್ಲಿ ಕೊಡಬೇಕೆಂಬುದಿದೆ. ಇದರಲ್ಲಿ ಗುಲಮರಾಗುವ ಅಂಶ ಎಲ್ಲಿದೆ ಎಂದು ಪ್ರಶ್ನಿಸಿದರು.
ಇನ್ನೂ ಈಗ ಮಾನ್ಯ ಸಿದ್ದರಾಮಯ್ಯನವರು ರಾಷ್ಟ್ರ ಭಾಷೆ ಒಪ್ಪಿಕೊಳ್ಳುತ್ತಾರೋ ನಮ್ಮ ಮೇಲೆ ಅಕ್ರಮಣ ಮಾಡಿ ಹೇರಿರುವ ಗುಲಾಮಗಿರಿ ಭಾಷೆ ಭಾಷರಗೆ ಪ್ರಾಧಾನ್ಯತೆ ಕೊಡುತ್ತಾರೋ. ಮಾತೃಭಾಷೆಗೆ ಮನ್ನಣೆ ಕೊಡಿ ಸಂಪರ್ಕ ಭಾಷೆಗೆ ಇಂಗ್ಲಿಷ್ ಬದಲಾಗಿ ಹಿಂದಿ ಉಪಯೋಗಿಸಿ ಎಂದು ಹೇಳಿದ್ದಾರೆ ಎಂದರು.
ಮುಂದುವರೆದು ಹಿಂದಿ ನಮ್ಮ ರಾಷ್ಟ್ರದ ಭಾಷೆ, ಕನ್ನಡವನ್ನು ಕಡೆಗಣಿಸಿ ಅಂತ ಹೇಳಿಲ್ಲ, ಕನ್ನಡ ಬಿಟ್ಟುಕೊಟ್ಟು ಹಿಂದಿಯಲ್ಲಿ ಮಾತನಾಡಿ ಅಂದರೆ ನಾವು ಧ್ವನಿ ಎತ್ತುತ್ತಿದ್ವಿ. ಆದರೆ ಹಾಗೇನು ಅವರು ಹೇಳಿಲ್ಲ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ ಎಂದು ತಿಳಿಸಿದರು.
ಆ ಮಾನಸಿಕತೆಯಲ್ಲಿ ಯೋಜನೆ ಮಾಡೋದಾದರೆ, ಸಿದ್ದರಾಮಯ್ಯ ಇಂಗ್ಲಿಷ್ ಭಾಷೆಯ ಗುಲಾಮ ಅಂತ ಒಪ್ಪಿಕೊಳ್ಳಬೇಕಿದೆ. ಅಮಿತ್ ಷಾ ಹೇಳಿದ ಮಾತನ್ನು ಅವರು ತಿರುಚಿ ಹೇಳುವುದಾದರೇ, ಸಿದ್ದರಾಮಯ್ಯನವರು ಸ್ವತಃ ಒಪ್ಪಿಕೊಳ್ಳಬೇಕಾಗಿದೆ. ನಾನು ಇಂಗ್ಲಿಷ್ ನಾ ಗುಲಾಮ, ಸೋನಿಯಾ ಗುಲಾಮ ಅಂತ ಒಪ್ಪಿಕೊಂಡು ನಮಗೆ ಪಾಠ ಹೇಳಬೇಕು ಎಂದು ಕಾಲೆಳೆದರು.
ಇನ್ನೂ ಭ್ರಷ್ಟಚಾರವನ್ನು ಬಿತ್ತಿ ಬೆಳೆಸಿದ್ದು ಕಾಂಗ್ರೆಸ್, ಕಾಂಗ್ರೆಸ್ ವ್ಯವಸ್ಥೆಯೊಳಗೆ ಭ್ರಷ್ಟಚಾರ ಸೇರಿ ಹೋಗಿದೆ ಅದನ್ನು ನಿಯಂತ್ರಿಸಬೇಕಾಗಿದೆ. ಪಿಎಸ್ಐ ನೇಮಕಾತಿಯಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಂಡಿರುವುದು ಬಿಜೆಪಿ ಸರ್ಕಾರ. ಕಠಿಣ ಕ್ರಮ ತೆಗೆದುಕೊಂಡೆ ಅಪರಾಧ ಹೇಗಾಗುತ್ತೆ. ಕ್ರಮ ತೆಗೆದುಕೊಳ್ಳದಿದ್ದರೆ, ಅಪರಾಧ ಆಗುತ್ತಿತ್ತು. ಮುಚ್ಚಿ ಹಾಕಿದ್ರೆ ಅಪರಾಧ ಆಗುತ್ತಿತ್ತು ಎಂದು ತಿಳಿಸಿದರು.









