ವಿಶ್ವ ಕ್ರಿಕೆಟ್‌ನ ಹಿಟ್‌ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸ್‌ಗಳನ್ನ ಬಾರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ದೆಹಲಿಯ ಅರುಣ್ ಜೈಟ್ಲಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ, ಭರ್ಜರಿ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿ ಮಿಂಚಿದರು. ಇನ್ನಿಂಗ್ಸ್ ಆರಂಭದಿಂದಲೂ ಸ್ಪೋಟಕ ಆಟವಾಡಿದ ಹಿಟ್‌ಮ್ಯಾನ್, ದೆಹಲಿ ಅಂಗಳದಲ್ಲಿ ಬೌಂಡರಿ, ಸಿಕ್ಸ್‌ಗಳನ್ನ ಸಿಡಿಸುವ ಮೂಲಕ ಅಬ್ಬರಿಸಿದರು.
ಅದ್ಭುತ ಆಟವಾಡಿದ ರೋಹಿತ್ ಶರ್ಮಾ ಕೇವಲ 84 ಬಾಲ್‌ಗಳಲ್ಲಿ 16 ಬೌಂಡರಿ ಹಾಗೂ ಭರ್ಜರಿ 5 ಸಿಕ್ಸ್‌ಗಳ ಮೂಲಕ 131 ರನ್‌ಗಳಿಸಿದರು. ತಮ್ಮ ಈ ಇನ್ನಿಂಗ್ಸ್‌ನ ಮೂಲಕ 473 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 556 ಸಿಕ್ಸ್‌ಗಳನ್ನ ಬಾರಿದ ಟೀಂ ಇಂಡಿಯಾ ನಾಯಕ, ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್‌ಗಳನ್ನ ಬಾರಿಸಿದ್ದ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಯ್ಲ್(553 ಸಿಕ್ಸ್) ದಾಖಲೆ ಮುರಿಯುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಸಿಕ್ಸ್‌ಗಳ ಸರದಾರ ಎಂಬ ಹೆಗ್ಗಳಿಕೆ ಪಡೆದುಕೊಂಡರು.
ಸಚಿನ್ ದಾಖಲೆ ಬ್ರೇಕ್:
ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ರೋಹಿತ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 31ನೇ ಶತಕ ದಾಖಲಿಸಿದರು. ಅಲ್ಲದೇ ಈ ಶತಕದ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ತಮ್ಮ 7ನೇ ಶತಕ ಬಾರಿಸಿದ ರೋಹಿತ್, ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ದಾಖಲೆ ಬ್ರೇಕ್ ಮಾಡಿದರು. ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಹೆಚ್ಚು ಶತಕಗಳನ್ನ ದಾಖಲಿಸಿದ ಹೆಗ್ಗಳಿಕೆ ಸಚಿನ್ ತೆಂಡುಲ್ಕರ್(6 ಶತಕಗಳು) ಹೆಸರಿನಲ್ಲಿತ್ತು. ಆದರೆ ವಿಶ್ವಕಪ್‌ನಲ್ಲಿ 7ನೇ ಶತಕ ಬಾರಿಸಿದ ರೋಹಿತ್ ಶರ್ಮಾ, ಇದೀಗ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದರು.
CWC 2023, Team India, Rohit Sharma, World Cup, ODI Cricket