ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಟೀಂ ಇಂಡಿಯಾವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾ, ಏಕದಿನ ವಿಶ್ವಕಪ್ನ ಮಹತ್ವದ ಮೈಲುಗಲ್ಲಿನ ಮೇಲೆ ಕಣ್ಣಿಟ್ಟಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ತಮ್ಮದೇ ಶ್ರೇಷ್ಠ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ, ಇದೀಗ 1500 ರನ್ಗಳ ಗಡಿದಾಟುವ ಸನಿಹದಲ್ಲಿದ್ದು, ಆ ಮೂಲಕ ಈ ಮೈಲುಗಲ್ಲು ದಾಟಿದ 5ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ರೋಹಿತ್ ಭಾಜನರಾಗಲಿದ್ದಾರೆ. ನವೆಂಬರ್ 12ಕ್ಕೆ ನೆದರ್ಲೆಂಡ್ಸ್ ವಿರುದ್ಧ ನಡೆಯುವ ವಿಶ್ವಕಪ್ನ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಈ ಮೈಲುಗಲ್ಲು ದಾಟುವ ನಿರೀಕ್ಷೆ ಹೊಂದಿದ್ದಾರೆ.
ವಿಶ್ವಕಪ್ನಲ್ಲಿ ಸರ್ವಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿರುವ ರೋಹಿತ್ ಶರ್ಮ, ವಿಶ್ವಕಪ್ನಲ್ಲಿ ಈವರೆಗೂ ಆಡಿರುವ 25 ಪಂದ್ಯಗಳಲ್ಲಿ 1420 ರನ್ಗಳನ್ನ ಕಲೆಹಾಕಿದ್ದಾರೆ. ಹೀಗಾಗಿ 1500 ರನ್ಗಳ ಗಡಿದಾಟಲು ಟೀಂ ಇಂಡಿಯಾ ನಾಯಕನಿಗೆ ಕೇವಲ 80 ರನ್ಗಳ ಅಗತ್ಯವಿದೆ. ಏಕದಿನ ವಿಶ್ವಕಪ್ನಲ್ಲಿ ಈವರೆಗೂ ಕೇವಲ ನಾಲ್ವರು ಆಟಗಾರರು ಮಾತ್ರವೇ ರೋಹಿತ್ ಶರ್ಮಾ ಅವರಿಗಿಂತ ಹೆಚ್ಚು ರನ್ಗಳನ್ನ ಕಲೆಹಾಕಿದ್ದಾರೆ.
ಪ್ರಮುಖವಾಗಿ ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿ ಹಾಗೂ ಕುಮಾರ ಸಂಗಕ್ಕಾರ ಅವರುಗಳು ಏಕದಿನ ವಿಶ್ವಕಪ್ನಲ್ಲಿ 1500 ರನ್ಗಳ ಗಡಿದಾಟಿದ್ದಾರೆ. ಹೀಗಾಗಿ ವಿಶ್ವಕಪ್ನಲ್ಲಿ ಹೆಚ್ಚು ರನ್ಗಳಿಸಿದ ಬ್ಯಾಟರ್ಗಳ ಸಾಲಿನಲ್ಲಿರುವ ಹಿಟ್ಮ್ಯಾನ್, ಪ್ರಸಕ್ತ ವಿಶ್ವಕಪ್ನಲ್ಲಿ ಎಂಟು ಪಂದ್ಯಗಳನ್ನ ಆಡಿದ್ದು, 442 ರನ್ಗಳಿಸಿದ್ದಾರೆ.
CWC 2023, Rohit Sharma, Team India, Most Runs, World Cup