ಭಾರತದಲ್ಲಿ ನಡೆಯುತ್ತಿರುವ ಪ್ರಸಕ್ತ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶತಕಗಳ ಅಬ್ಬರ ಮುಂದುವರಿದಿದ್ದು, ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಹೆಚ್ಚು ಶತಕಗಳನ್ನ ಬಾರಿಸಿದ ತಂಡವಾಗಿ ಸೌತ್ ಆಫ್ರಿಕಾ ಹೊಸ ದಾಖಲೆ ಬರೆದಿದೆ.
ಪ್ರಸಕ್ತ ವಿಶ್ಚಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸೌತ್ ಆಫ್ರಿಕಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಯಶಸ್ಸಿನ ಅಲೆಯಲ್ಲಿದೆ. ಇದರ ಪರಿಣಾಮ ಪ್ರಸಕ್ತ ಏಕದಿನ ಟೂರ್ನಿಯಲ್ಲಿ ಹೆಚ್ಚು ಶತಕಗಳನ್ನ ಬಾರಿಸಿರುವ ತಂಡಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆದಿರುವ ಸೌತ್ ಆಫ್ರಿಕಾ ಬರೋಬ್ಬರಿ 8 ಶತಕಗಳನ್ನ ದಾಖಲಿಸಿದೆ. ಆ ಮೂಲಕ ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಹೆಚ್ಚು ಶತಕಗಳನ್ನ ಬಾರಿಸಿದ ತಂಡವಾಗಿ ಹೊಸ ದಾಖಲೆ ಬರೆದಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾ ಬ್ಯಾಟರ್‌ಗಳು ಭರ್ಜರಿ ಬ್ಯಾಟಿಂಗ್‌ನಿಂದ ಮಿಂಚಿದರು. ಪ್ರಮುಖವಾಗಿ ಕ್ವಿಂಟನ್ ಡಿಕಾಕ್(114) ಹಾಗೂ ವ್ಯಾನ್ ದರ್ ದುಸೇನ್(133) ಭರ್ಜರಿ ಶತಕ ಬಾರಿಸಿ ಮಿಂಚಿದರು. ಇವರಿಬ್ಬರ ಬ್ಯಾಟ್‌ನಿಂದ ಶತಕದ ಪರಿಣಾಮ 2023ರ ವಿಶ್ವಕಪ್‌ನಲ್ಲಿ ಸೌತ್ ಆಫ್ರಿಕಾ ತಂಡ ತನ್ನ 8ನೇ ಶತಕ ದಾಖಲಿಸಿದೆ. ಪ್ರಮುಖವಾಗಿ ಕ್ವಿಂಟನ್ ಡಿಕಾಕ್ ಪ್ರಸಕ್ತ ಟೂರ್ನಿಯಲ್ಲಿ ತಮ್ಮ 4ನೇ ಶತಕ ದಾಖಲಿಸಿ ಮಿಂಚಿದರೆ.
1ನೇ ಕ್ರಮಾಂಕದ ಬ್ಯಾಟ್ಸ್‌ಮನ್ ವ್ಯಾನ್‌ದರ್ ದುಸೇನ್ ತಮ್ಮ 2ನೇ ಶತಕ ದಾಖಲಿಸಿದರು. ಉಳಿದಂತೆ ಐಡೆನ್ ಮಾರ್ಕ್ರಂ ಹಾಗೂ ಹೆನ್ರಿಚ್ ಕ್ಲಾಸೆನ್ ತಲಾ 1 ಶತಕ ಬಾರಿಸಿದ್ದಾರೆ. ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದಲ್ಲಿ 2 ಶತಕಗಳನ್ನ ದಾಖಲಿಸುವ ಮೂಲಕ ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಹೆಚ್ಚು ಶತಕ ಬಾರಿಸಿರುವ ಶ್ರೀಲಂಕಾ ತಂಡದ ದಾಖಲೆ ಸರಿಗಟ್ಟಿದೆ.
CWC 2023, South Africa, New Zealand, World Cup, Most Centuries