ADVERTISEMENT
Thursday, April 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

CWC 2023: ವಿಶ್ವಕಪ್‌ನ ಸೆಮೀಸ್‌ ಪ್ರವೇಶಿಸಲು ಪ್ರಮುಖ ತಂಡಗಳ ಹಗ್ಗ-ಜಗ್ಗಾಟ ಶುರು

C Dinesh by C Dinesh
October 27, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Share on FacebookShare on TwitterShare on WhatsappShare on Telegram

ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾವ ತಂಡಗಳು ಟೂರ್ನಿಯ ಸೆಮೀಸ್‌ ಪ್ರವೇಶಿಸಲಿವೆ ಎಂಬ ಕುತೂಹಲದ ನಡುವೆಯೇ, ಸೆಮಿಫೈನಲ್‌ ಅರ್ಹತೆ ಪಡೆಯಲು ಪ್ರಮುಖ ತಂಡಗಳ ನಡುವೆ ಪೈಪೋಟಿ ಶುರುವಾಗಿದೆ.

ಭಾರತದಲ್ಲಿ ನಡೆಯುತ್ತಿರುವ ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಎಲ್ಲಾ ತಂಡಗಳು ಯಶಸ್ವಿಯಾಗಿದೆ. ಹೀಗಾಗಿ ಸದ್ಯ ಅಂಕಪಟ್ಟಿಯಲ್ಲಿ ಹಾವು-ಏಣಿ ಆಟ ಶುರುವಾಗಿದ್ದು, ಎಲ್ಲಾ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯುವ ಲೆಕ್ಕಾಚಾರದಲ್ಲಿವೆ. ಮುಖ್ಯವಾಗಿ ಟಾಪ್‌-5 ಸ್ಥಾನದಲ್ಲಿರುವ ತಂಡಗಳು ಉಳಿದ ಪಂದ್ಯಗಳಲ್ಲಿ ಗೆದ್ದು, ಸೆಮೀಸ್‌ ಪ್ರವೇಶಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿವೆ.

Related posts

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

March 29, 2026
RCB VS SRH : ಚಿನ್ನಸ್ವಾಮಿಯಲ್ಲಿ ಆರ್ ಸಿ ಬಿ ಅಬ್ಬರ ಕೊಹ್ಲಿ ಪಡಿಕ್ಕಲ್ ಜುಗಲ್ಬಂದಿಗೆ ಹೈದರಾಬಾದ್ ಧೂಳೀಪಟ

RCB VS SRH : ಚಿನ್ನಸ್ವಾಮಿಯಲ್ಲಿ ಆರ್ ಸಿ ಬಿ ಅಬ್ಬರ ಕೊಹ್ಲಿ ಪಡಿಕ್ಕಲ್ ಜುಗಲ್ಬಂದಿಗೆ ಹೈದರಾಬಾದ್ ಧೂಳೀಪಟ

March 29, 2026

ಟೂರ್ನಿಯಲ್ಲಿ ಸದ್ಯ ಆಡಿರುವ ಐದು ಪಂದ್ಯಗಳಲ್ಲಿ ಗೆಲುವು ಪಡೆದಿರುವ ಭಾರತ ಪ್ರಸ್ತುತ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಂ.1 ಸ್ಥಾನದಲ್ಲಿದೆ. ಅಲ್ಲದೇ ಮುಂದಿನ ನಾಲ್ಕು ಪಂದ್ಯಗಳಲ್ಲೂ ಇದೇ ಪ್ರದರ್ಶನ ನೀಡುವ ಮೂಲಕ ಸೆಮೀಸ್‌ ಪ್ರವೇಶಿಸುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಆಡಿರುವ ಐದು ಪಂದ್ಯಗಳಲ್ಲಿ 1 ಸೋಲು ಹಾಗೂ 4 ಗೆಲುವು ಕಂಡಿರುವ ಸೌತ್‌ ಆಫ್ರಿಕಾ 2ನೇ ಸ್ಥಾನದಲ್ಲಿದ್ದು, ಉತ್ತಮ ರನ್‌ರೇಟ್‌ ಹೊಂದಿರುವ ಹರಿಣಗಳು ಸಹ ಸುಲಭವಾಗಿ ಸೆಮೀಸ್‌ಗೆ ಲಗ್ಗೆ ಇಡುವ ಅವಕಾಶ ಹೊಂದಿದೆ.

World Cup

ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು, ಒಂದು ಸೋಲು ಕಂಡಿರುವ ನ್ಯೂಜಿ಼ಲೆಂಡ್‌ ಸದ್ಯ 3ನೇ ಸ್ಥಾನದಲ್ಲಿದ್ದು, ಮುಂದಿನ ಪಂದ್ಯಗಳಲ್ಲಿ ಜಯದ ಹಾದಿಯಲ್ಲೇ ಸಾಗಿದರೆ ಕಿವೀಸ್‌ ಸಹ ಸೆಮೀಸ್‌ ಪ್ರವೇಶಿಸುವ ಅವಕಾಶ ಹೊಂದಿದೆ. ಮೇಲ್ನೋಟಕ್ಕೆ ಟಾಪ್‌-3 ಸ್ಥಾನದಲ್ಲಿರುವ ಭಾರತ, ಸೌತ್‌ ಆಫ್ರಿಕಾ ಹಾಗೂ ನ್ಯೂಜಿ಼ಲೆಂಡ್‌ ತಂಡಗಳು ಬಾಕಿಯಿರುವ ತಮ್ಮ 4 ಪಂದ್ಯಗಳಲ್ಲಿ ಒಂದು ಅಥವಾ ಎರಡು ಪಂದ್ಯಗಳಲ್ಲಿ ಗೆದ್ದರೂ, ಸೆಮೀಸ್‌ ಪ್ರವೇಶದ ಅವಕಾಶ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಆದರೆ ಇದೀಗ 4ನೇ ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ. ಸದ್ಯ ಪಾಯಿಂಟ್ಸ್‌ ಟೇಬಲ್‌ನಲ್ಲಿ(6 ಅಂಕಗಳು) 4ನೇ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ ಈ ರೇಸ್‌ನಲ್ಲಿ ಮಂಚೂಣಿಯಲ್ಲಿ ಕಾಣಿಸಿಕೊಂಡರೆ. ಪಾಕಿಸ್ತಾನ, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಕೂಡ ಸೆಮಿಫೈನಲ್‌ ಪ್ರವೇಶಿಸುವ ಲೆಕ್ಕಾಚಾರದಲ್ಲಿವೆ. ಆದರೆ ಇದಕ್ಕಾಗಿ ಈ ತಂಡಗಳು ತಮ್ಮ ಮುಂದಿನ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಜೊತೆಗೆ ರನ್‌ರೇಟ್‌ ಸಹ ಉತ್ತಮಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಉಳಿದಂತೆ ಅಂಕಪಟ್ಟಿಯಲ್ಲಿ ಪ್ರಸ್ತುತ ಕಡೆಯ ಮೂರು ಸ್ಥಾನದಲ್ಲಿರುವ ಬಾಂಗ್ಲಾದೇಶ(8ನೇ ಸ್ಥಾನ), ಹಾಲಿ ಚಾಂಪಿಯನ್‌ ಇಂಗ್ಲೆಂಡ್‌(9ನೇ ಸ್ಥಾನ) ಹಾಗೂ ನೆದರ್ಲೆಂಡ್ಸ್‌(10ನೇ ಸ್ಥಾನ) ತಂಡಗಳು ಸೆಮೀಸ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿವೆ. ಒಂದೊಮ್ಮೆ ಈ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಬೇಕಾದರೆ ಮುಂದಿನ ತಮ್ಮ 4 ಪಂದ್ಯಗಳಲ್ಲಿ ಭಾರೀ ಅಂತರದಲ್ಲಿ ಗೆದ್ದು, ರನ್‌ರೇಟ್‌ ಉತ್ತಮಪಡಿಸಿಕೊಳ್ಳಬೇಕಾಗಿದೆ. ಆದರೆ ಈ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಬಲಿಷ್ಠ ತಂಡಗಳನ್ನ ಎದುರಿಸಬೇಕಿದ್ದು, ಸುಲಭವಾಗಿ ಗೆಲ್ಲುವುದು ಕಷ್ಟಕರವಾಗಿದೆ.

CWC 2023, World Cup, ODI Cricket, Team India, Points Table

ShareTweetSendShare
Join us on:

Related Posts

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

by Shwetha
March 29, 2026
0

2026ರ IPLನ ಮೊದಲ ಪಂದ್ಯವು ಬೆಂಗಳೂರಿನಲ್ಲಿ RCB & SRH ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಬೆಂಗಳೂರಿನ ಗಿರಿನಗರದ ರಾಷ್ಟೋತ್ಥಾನ ರಕ್ತ ಕೇಂದ್ರದಲ್ಲಿ ನೂರಾರು RCB...

RCB VS SRH : ಚಿನ್ನಸ್ವಾಮಿಯಲ್ಲಿ ಆರ್ ಸಿ ಬಿ ಅಬ್ಬರ ಕೊಹ್ಲಿ ಪಡಿಕ್ಕಲ್ ಜುಗಲ್ಬಂದಿಗೆ ಹೈದರಾಬಾದ್ ಧೂಳೀಪಟ

RCB VS SRH : ಚಿನ್ನಸ್ವಾಮಿಯಲ್ಲಿ ಆರ್ ಸಿ ಬಿ ಅಬ್ಬರ ಕೊಹ್ಲಿ ಪಡಿಕ್ಕಲ್ ಜುಗಲ್ಬಂದಿಗೆ ಹೈದರಾಬಾದ್ ಧೂಳೀಪಟ

by Shwetha
March 29, 2026
0

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹನ್ನೊಂದು ತಿಂಗಳ ಬಳಿಕ ಮತ್ತೆ ಕ್ರಿಕೆಟ್ ಹಬ್ಬ ಕಳೆಗಟ್ಟಿದೆ. ಮೈದಾನದೆಲ್ಲೆಡೆ ಕೆಂಪು ಸಾಗರವೇ ಹರಿದುಬಂದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ...

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

by Shwetha
March 19, 2026
0

ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಇತ್ತೀಚೆಗೆ ನಡೆದ 2026ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಐತಿಹಾಸಿಕ ಜಯ ಸಾಧಿಸುವ ಮೂಲಕ...

vvs lakshman and rahul dravid

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!

by admin
March 16, 2026
0

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..! ಅದು 2001. ಮಾರ್ಚ್ 15. ಭಾರತ - ಆಸ್ಟ್ರೇಲಿಯಾ ನಡುವಿನ...

ವಿಶ್ವಕಪ್ ಗೆಲುವಿನ ಅಮಲಿನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಕಂಟಕವಾದ ಸಂಭ್ರಮಾಚರಣೆ

ವಿಶ್ವಕಪ್ ಗೆಲುವಿನ ಅಮಲಿನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಕಂಟಕವಾದ ಸಂಭ್ರಮಾಚರಣೆ

by Shwetha
March 13, 2026
0

ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮವು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram