ಬೆಂಗಳೂರು : ಮಳೆಯರಿಗೆ ಅಶ್ಲೀಲ ದೃಶ್ಯ ಗಳನ್ನು ವಾಟ್ಸಪ್ ಮಾಡಿ ಕಿರುಕುಳ ನೀಡ್ತಿದ್ದ ಆರೋಪಿಯನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.. ಮಂಜ ಅಲಿಯಾಸ್ ಚೂಲ್ ಮಂಜ ಬಂಧಿತ ಆರೋಪಿಯಾಗಿದ್ದಾನೆ.
ಈತ ಬೆಂಗಳೂರು, ತುಮಕೂರು ಸೇರಿ ಒಟ್ಟು ಹದಿನೈದು ಕೇಸ್ ನಲ್ಲಿ ಬೇಕಾಗಿದ್ದ ಅರೋಪಿಯಾಗಿದ್ದಾನೆ. ಸೈಕೋ ಮಂಜ , ಕೃಷ್ಣ , ಪ್ರಶಾಂತ್ , ಪ್ರವೀಣ, ದಿವ್ಯರಾಜ್ ಎಂಬ ಹೆಸರಿನಲ್ಲಿ ಈ ಆರೋಪಿ ಮಹಿಳೆಯರಿಗೆ ಕಿರುಕುಳ ನೀಡ್ತಿದ್ದ.. ಕದ್ದ ಮೊಬೈಲ್ ನಲ್ಲಿರೋ ಮಹಿಳೆಯರ ನಂಬರ್ ಗೆ ವಾಟ್ಸಾಪ್ ಚಾಟ್ ಮಾಡ್ತಿದ್ದ ಎನ್ನಲಾಗಿದೆ.. ಇದೇ ರೀತಿ ಮಹಿಳೆಯಬ್ಬರಿಗೆ ಟಾರ್ಚರ್ ಮಾಡಿದ್ದಾನೆ. ಆಕೆಯ ಮೊಬೈಲ್ ನಲ್ಲಿದ್ದ ಚಾಟ್ ಸ್ಕ್ರೀನ್ ಶಾಟ್ ಅವರ ಗಂಡನಿಗೆ ಕಳಿಸೋದಾಗಿ ಬೆದರಿಕೆ ಹಾಕಿದ್ದಾನೆ.. ಬ್ಲಾಕ್ ಮೇಲ್ ಮಾಡುತ್ತಾ ಮಂಚಕ್ಕೆ ಕರೆಯುತ್ತಿದ್ದ ಎನ್ನಲಾಗಿದೆ..
ಅಲ್ಲದೇ ಈ ಆರೋಪಿಯು ಪೊಲೀಸರು ಅರೆಸ್ಟ್ ಮಾಡಲು ಬಂದಾಗ ತನಗೆ ಏಡ್ಸ್ ಇದೆ ಎಂದು ಹೆದರಿಸಿದ್ದ ಎನ್ನಲಾಗಿದೆ. ತುಮಕೂರು ಮತ್ತು ಬೆಂಗಳೂರು ಪೊಲೀಸರು ಅರೋಪಿಗಾಗಿ ಹುಡುಕಾಟ ನಡೆಸುತ್ತಿದ್ದದರು. ಅಷ್ಟೇ ಅಲ್ಲದೇ ಪೊಲೀಸರಿಗೆ ತಾಕತ್ ಇದ್ರೆ ಅರೆಸ್ಟ್ ಮಾಡಿ ಎಂದು ಅವಾಜ್ ಹಾಕಿದ್ದ ಎನ್ನಲಾಗಿದೆ. ಸದ್ಯ ಅರೋಪಿ ಮಂಜನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿತನಿಖೆ ನಡೆಸುತ್ತಿದ್ದಾರೆ.