ಕಾರವಾರ: ಸಿಲಿಂಡರ್ ಸ್ಫೋಟವಾದ ಪರಿಣಾಮ ಹಲವು ಮನೆಗಳಿಗೆ ಬೆಂಕಿ ಹೊತ್ತಿದ ಘಟನೆ ನಡೆದಿದೆ.
ಕಾರವಾರದ ಮುದಗಾ ನೌಕಾನೆಲೆ ಲೇಬರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ನೌಕಾನೆಲೆಯ ಎನ್ಸಿಸಿ ಗುತ್ತಿಗೆ ಕಂಪನಿ ಶೆಡ್ಗಳು ಹೊತ್ತಿ ಉರಿದಿವೆ. ಅಡುಗೆ ಸಿಲಿಂಡರ್ ಸಿಡಿದು ಬೆಂಕಿ ಹೊತ್ತಿಕೊಂಡಿದ್ದು, ಒಂದು ಸಾಲಿನ ನಾಲ್ಕೈದು ಶೆಡ್ಗಳಿಗೆ ಬೆಂಕಿ ವ್ಯಾಪಿಸಿದೆ. ಈ ಶೆಡ್ ಗಳಲ್ಲಿ ಕಾರ್ಮಿಕರು ಇದ್ದರು. ಬೆಂಕಿ ಹತ್ತುತ್ತಿದ್ದಂತೆ ಅವರೆಲ್ಲ ಓಡಿ ಹೋಗಿದ್ದಾರೆ.
ಈ ಕಾಲೋನಿಯಲ್ಲಿ ಸುಮಾರು 150ಕ್ಕೂ ಅಧಿಕ ಶೆಡ್ಗಳಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.