ಸುಮಲತಾ ಅಂಬರೀಶ ಅವರಿಗೆ ಓಪನ್ ಚಾಲೆಂಜ್ ಹಾಕಿದ ಡಿ. ಸಿ ತಮ್ಮಣ್ಣ
ಮಂಡ್ಯ: ನಮ್ಮ ಕೆಲಸದ ಬಗ್ಗೆ ಓಪನ್ ಚಾಲೆಂಜ್ ಮಾಡಲಿ, ಚರ್ಚೆಗೆ ತಯಾರಿದ್ದೇವೆ ಎಂದು ಜಡಿಎಸ್ ಶಾಸಕ ಡಿ.ಸಿ ತಮ್ಮಣ್ಣ, ಸಂಸದೆ ಸುಮಲತಾ ಅಂಬರೀಶ ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇನ್ನೊಬ್ಬರ ಪ್ರಮಾಣ ಪತ್ರ ತೆಗೆದುಕೊಳ್ಳುವ ಅವಶ್ಯಕತೆ ನನಗಿಲ್ಲ. ನಮ್ಮ ಕ್ಷೇತ್ರದ ಜನ ಯಾವ ಪ್ರಮಾಣ ಪತ್ರ ಕೊಡುತ್ತಾರೆ ಅದು ಮುಖ್ಯ ಎನ್ನುವ ಮೂಲಕ ಡಿ.ಸಿ ತಮ್ಮಣ್ಣ ಸಂಸದೆ ಸುಮಲತಾ ಅಂಬರೀಶ ಅವರಿಗೆ ಪಂಥಾಹ್ವಾನ ನೀಡಿದ್ದಾರೆ.
ಅಲ್ಲದೇ ಸಮಸ್ಯೆ ಇದ್ದರೆ ಜನ ನಮ್ಮ ಬಳಿ ಬರಬೇಕು ಅವರ ಬಳಿ ಹೋದರೆ ಏನು ಆಗುತ್ತೆ. ಸಮಸ್ಯೆಯನ್ನು ಬಗೆಹರಿಸುವುದಿದ್ದರೆ ಸುಮಲತಾರೆ ಬಗೆಹರಿಸಲಿ. ನಮ್ಮ ಕೆಲಸದ ಬಗ್ಗೆ ಓಪನ್ ಚಾಲೆಂಜ್ ಮಾಡಲಿ. ಚರ್ಚೆಗೆ ತಯಾರಿದ್ದೇವೆ. ಸಮಲತಾ ಯಾವಾಗ ಬೇಕಿದ್ದರು ಬರಲಿ ಎಂದು ಆಹ್ವಾನ ನೀಡಿದ್ದಾರೆ.