ಡಿಕೆಶಿಯಂತ ಸೌಜನ್ಯ ಸಿದ್ದರಾಮಯ್ಯ siddaramaiah ಗೂ ಬರಬೇಕು : ಟಗರಿಗೆ ಕುಟುಕಿದ ಹಳ್ಳಿಹಕ್ಕಿ
ಮೈಸೂರು : ದ್ವೇಷ ಸಾಧನೆ ಮಾಡುವುದಲ್ಲ. ಡಿಕೆಶಿಯಂತ ಸೌಜನ್ಯ ಸಿದ್ದರಾಮಯ್ಯಗೂ ಬರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ನಾಯಕ ಹೆಚ್ ವಿಶ್ವನಾಥ್ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಗೆ ಯಾರಾದ್ರೂ ಬರಬಹುದು ಎಂಬ ಡಿಕೆಶಿ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆದಾಕ್ಷಣ ಯಾರೂ ಕಾಂಗ್ರೆಸ್‍ಗೆ ಹೋಗಲ್ಲ.
ಆದರೆ, ಅವರ ಸೌಜನ್ಯ ಇದೆಯಲ್ಲ ಅದು ಮೆಚ್ಚುವಂತಹದ್ದು. ಸಿದ್ದರಾಮಯ್ಯಗೆ ನಾವು ಬಂದು ಬಿಡ್ತೀವಿ ಅನ್ನೋ ಆತಂಕನೂ ಬೇಡ ಎಂದು ಕುಟುಕಿದರು.
ಇನ್ನು ಡಿ.ಕೆ. ಶಿವಕುಮಾರ್ ಒಬ್ಬ ಸಂಘಟನಾ ಚತುರ. ಸಿದ್ದರಾಮಯ್ಯರನ್ನ ಜೆಡಿಎಸ್‍ನಿಂದ ಕಿತ್ತೆಸೆದಾಗ, ಇದೇ ಡಿ.ಕೆ. ಶಿವಕುಮಾರ್, ನಾನು, ಎಸ್.ಎಂ. ಕೃಷ್ಣ ಎಲ್ಲಾ ಸೇರಿ ಕಾಂಗ್ರೆಸ್ ಗೆ ಸೇರಿಸಿಕೊಂಡೆವು.
ಅವಾಗ ಯಾರಾದ್ರು ಸಿದ್ದರಾಮಯ್ಯ ಬಂದ್ರು ಪ್ರಳಯ ಆಗುತ್ತೆ ಅಂದ್ರಾ.. ಎಂದು ಪ್ರಶ್ನಿಸಿದರು. ಅಲ್ಲದೆ ದ್ವೇಷ ಸಾಧನೆ ಮಾಡುವುದಲ್ಲ. ಡಿಕೆಶಿಯಂತ ಸೌಜನ್ಯ ಸಿದ್ದರಾಮಯ್ಯಗೂ ಬರಬೇಕು ಎಂದು ಕುಟುಕಿದರು.