Daali Dhananjay : ಕುತೂಹಲ ಮೂಡಿಸಿದ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಟೀಸರ್…
ನಟ ರಾಕ್ಷಸ ಡಾಲಿ ಧನಂಜಯ್ ನಟನೆಯ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಟೀಸರ್ ನಲ್ಲಿ ಧನಂಜಯ್ ಒಮ್ಮೊಮ್ಮೆ ಕೋಮಲವಾಗಿ ಒಮ್ಮೊಮ್ಮೆ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ಇವರಿಗೆ ಪೈಪೋಟಿ ನಿಡುವಂತೆ ಅದಿತಿ ಪ್ರಭುದೇವ ನಟಿಸಿದ್ದಾರೆ. ಭಾವನಾ, ಬೇಬಿ ಪ್ರಣ್ಯ ಮತ್ತು ಪ್ರಕಾಶ್ ಬೆಳವಾಡಿ ಮುಂತಾದವರ ಅಭಿನಯ ಚಿತ್ರದ ನಿರೀಕ್ಷೆಯನ್ನ ಹೆಚ್ಚಿಸಿದೆ.
ನಿಹಾರಿಕಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಶ್ರೀಹರಿ ರೆಡ್ಡಿ ಚಿತ್ರ ನಿರ್ಮಾಣ ಮಾಡಿದ್ದು, ಕುಶಾಲ್ ಗೌಡ ಭರವಸೆ ಮೂಡುವಂತೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಗೆ ಅನೂಪ್ ಸೀಳಿನ್ ಅವರು ಹಿನ್ನೆಲೆ ಸಂಗೀತ ನೀಡಿದ್ದರೆ, ಅರ್ಜುನ್ ಜನ್ಯ ಅವರ ಹಾಡುಗಳನ್ನು ಸಂಯೋಜಿಸಿದ್ದಾರೆ.
ಡಿಸೆಂಬರ್ 30 ರಂದು ಚಿತ್ರ ತೆರೆಗೆ ಬರಲಿದ್ದು ನಟ ರಾಕ್ಷಸ ಧನಂಜಯ್ ಅಭಿನಯದ ಈ ವರ್ಷದ ಕೊನೆಯ ಚಿತ್ರ ಇದಾಗಿದೆ.
Daali Dhananjay: Once Upon a Time in Jamaligudda Teaser that created curiosity…