Dadasaheb Phalke Film Festival – ವರ್ಷದ ಸಿನಿಮಾ ಪ್ರಶಸ್ತಿ ಪಡೆದ “ಪುಷ್ಪ” : ಇಲ್ಲಿದೆ ಪೂರ್ತಿ ವಿವರ.
2022 ದಾದಾ ಸಾಹೇಬ್ ಪಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸ ಭಾನುವಾರ ಮುಂಬೈನಲ್ಲಿ ನಡೆದಿದೆ. ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ಈ “ವರ್ಷದ ಸಿನಿಮಾ” ಪ್ರಶಸ್ತಿಗೆ ಆಯ್ಕೆಯಾಗಿದೆ.
ಭಾರತಕ್ಕಾಗಿ ಚೊಚ್ಚಲ ಕ್ರಿಕೆಟ್ ವರ್ಲ್ಡ್ ಕಪ್ ತಂದು ಕೊಟ್ಟ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದ ರಣವೀರ್ ಸಿಂಗ್ ಅವರಿಗೆ 83 ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಲಾಗಿದೆ. 83 ಚಿತ್ರಕ್ಕೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಭಾಕ್ಸ್ ಆಫೀಸ್ ನಲ್ಲಿ ಅಂದುಕೊಂಡ ಮಟ್ಟಕ್ಕೆ ಹಿಟ್ ಆಗದೇ ಇದ್ದರೂ, ವಿಮರ್ಶಕರ ಮೆಚ್ಚುಗೆ ಗಳಿಸಿತ್ತು.
‘ಮಿಮಿ’ ಚಿತ್ರಕ್ಕಾಗಿ ನಟಿ ಕೃತಿ ಸನೋನ್ ಅತ್ಯುತ್ತಮ ನಟಿಯಾಗಿ ಆಯ್ಕೆಯಾಗಿದ್ದಾರೆ.
ಯಾರು ಯಾರಿಗೆ ದಾದಾ ಸಾಹೇಬ್ ಪಾಲ್ಕೆ ಚಿತ್ರದ ಪ್ರಶಸ್ತಿ ಸಿಕ್ಕಿದೆ ಎನ್ನುವುದರ ಫುಲ್ ಡೀಟೇಲ್ಸ್ ಇಲ್ಲಿದೆ.
ವರ್ಷದ ಸಿನಿಮಾ: ಪುಷ್ಪ
ಅತ್ಯುತ್ತಮ ಸಿನಿಮಾ: ಶೇರ್ಷಾ
ಅತ್ಯುತ್ತಮ ನಟ: ರಣವೀರ್ ಸಿಂಗ್
ಅತ್ಯುತ್ತಮ ನಟಿ ಕೃತಿ ಸನೋನ್
ಅತ್ಯುತ್ತಮ ನಿರ್ದೇಶಕ: ಕೆನ್ ಘೋಷ್
ಚಿತ್ರರಂಗಕ್ಕೆ ಅಪಾರ ಕೊಡುಗೆ: ಆಶಾ ಪರೇಖ್
ಅತ್ಯುತ್ತಮ ಪೋಷಕ ನಟ: ಸತೀಶ್ ಕೌಶಿಕ್
ಅತ್ಯುತ್ತಮ ಫೋಷಕ ನಟಿ: ಲಾರಾ ದತ್ತಾ
ಅತ್ಯುತ್ತಮ ಖಳ ನಟ: ಆಯುಷ್ ಶರ್ಮಾ
ವಿಮರ್ಶಕರ ಆಯ್ಕೆಯ ಅತ್ಯುತ್ತಮ ಚಿತ್ರ: ಸರ್ದಾರ್ ಉದ್ಧಮ್
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ಸಿದ್ದಾರ್ಥ್ ಮಲ್ಹೋತ್ರ
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ ಕಿಯಾರಾ ಅಡ್ವಾಣಿ
ಜನರ ಆಯ್ಕೆಯ ಅತ್ಯುತ್ತಮ ನಟ: ಅಭಿಮನ್ಯು ದಾಸಾನಿ
ಜನರ ಆಯ್ಕೆಯ ಅತ್ಯುತ್ತಮ ನಟಿ: ರಾಧಿಕಾ ಮದನ್
ಅತ್ಯುತ್ತಮ ಹೊಸ ನಟ: ಅಹಾನ್ ಶೆಟ್ಟಿ
ಅತ್ಯುತ್ತಮ ವಿದೇಶಿ ಸಿನಿಮಾ: ಅನದರ್ ರೌಂಡ್
ಅತ್ಯುತ್ತಮ ವೆಬ್ ಸಿರೀಸ್: ಕ್ಯಾಂಡಿ
ವೆಬ್ ಸಿರೀಸ್ನಲ್ಲಿ ಅತ್ಯುತ್ತಮ ನಟ: ಮನೋಜ್ ಭಾಜಪೇಯಿ
ವೆಬ್ ಸಿರೀಸ್ನಲ್ಲಿ ಅತ್ಯುತ್ತಮ ನಟಿ: ರವೀನಾ ಟಂಡನ್
ವರ್ಷದ ಅತ್ಯುತ್ತಮ ಟಿವಿ ಧಾರಾವಾಹಿ: ಅನುಪಮಾ
ಕಿರುತೆರೆಯ ಅತ್ಯುತ್ತಮ ನಟ: ಶಾಹೀರ್ ಶೇಖ್
ಕಿರುತೆರೆಯ ಅತ್ಯುತ್ತಮ ನಟಿ: ಶ್ರದ್ಧಾ ಆರ್ಯ
ಕಿರುತೆರೆಯ ಭರವಸೆಯ ನಟ: ಧೀರಜ್ ಧೂಪರ್
ಕಿರುತೆರೆಯ ಭರವಸೆಯ ನಟಿ: ರೂಪಾಲಿ ಗಂಗೂಲಿ
ಅತ್ಯುತ್ತಮ ಕಿರುಚಿತ್ರ: ಪೌಲಿ
ಅತ್ಯುತ್ತಮ ಹಿನ್ನೆಲೆ ಗಾಯಕ: ವಿಶಾಲ್ ಮಿಶ್ರಾ
ಅತ್ಯುತ್ತಮ ಹಿನ್ನೆಲೆ ಗಾಯಕಿ: ಕನಿಕಾ ಕಪೂರ್
ಅತ್ಯುತ್ತಮ ಛಾಯಾಗ್ರಹಣ: ಜಯಕೃಷ್ಣ ಗುಮ್ಮಡಿ