Chikkodi: ಅಕಾಲಿಕ ಮಳೆಯಿಂದ ಒಣ ದ್ರಾಕ್ಷಿ, ಮಾವು ಬೆಳೆ ನಾಶ

1 min read
Dry Grapes Saaksha Tv

ಅಕಾಲಿಕ ಮಳೆಯಿಂದ ಒಣ ದ್ರಾಕ್ಷಿ, ಮಾವು ಬೆಳೆ ನಾಶ

ಚಿಕ್ಕೋಡಿ: ನಿನ್ನೆ (ಶುಕ್ರವಾರ) ರಾತ್ರಿ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಸಾಕಷ್ಟು ಅನಾಹುತಗಳಾಗಿದ್ದು, ಚಿಕ್ಕೋಡಿ ಉಪವಿಭಾಗದಲ್ಲಿ ಉಂಟಾದ ಅಕಾಲಿಕ ಮಳೆಯಿಂದ ಒಣ ದ್ರಾಕ್ಷಿ ನಾಶವಾಗಿದೆ.

ಚಿಕ್ಕೋಡಿಯ ಉಪವಿಭಾಗದಲ್ಲಿ ಬರುವ ಅಥಣಿ, ರಾಯಬಾಗ, ಕಾಗವಾಡ, ಅಕಾಲಿಕ ಗಾಳಿಸಹಿತ ಮಳೆಯಾಗಿದೆ.  ಪರಿಣಾಮ ಅಪಾರ ಪ್ರಮಾಣದ ಒಣ ದ್ರಾಕ್ಷಿ, ಮಾವು ಬೆಳೆ ಮಾಶವಾಗಿದೆ.

ಅಲ್ಲದೇ ಅಥಣಿ ಮತ್ತು ಕಾಗವಾಡದಲ್ಲಿ ಉಂಟಾದ ಗಾಳಿಸಹಿತ ಮಳೆಯಿಂದ ಹಲವು ಮರಗಳು ಧರೆಗುರಳಿವೆ. ಹಾಗೇ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಆಲಿಕಲ್ಲು ಮಳೆಯಿಂದ 10ಕ್ಕೂ ಹೆಚ್ಚು ವಿದ್ಯತ್ ಕಂಬ, ಟ್ರಾನ್ಸ್ಫರ್ಮರ್ ಧರೆಗುರಳಿವೆ.

ಇನ್ನೂ ಗಾಳಿಗೆ 50ಕ್ಕೂ ಹೆಚ್ಚೂ ಮನೆಗಳಿಗೆ ಹಾಕಿದ್ದ ಶೀಟ್ ಗಳು ಹಾರಿಹೋಗಿವೆ. ಇದರಿಂದ ಜನರು ಸೂರು ಇಲ್ಲದೆ ಪರದಾಡುತ್ತಿದ್ದಾರೆ. ಮಳೆ-ಗಾಳಿಗೆ ಒಣ ದ್ರಾಕ್ಷಿ ಮತ್ತು ಮಾವು ಬೆಳೆ ನಾಶವಾಗಿದ್ದರಿಂದ ರೈತನಿಗೆ ದಿಕ್ಕೆ ತೋಚದಂತಾಗಿದೆ. ವರ್ಷ ಪೂರ್ತಿ ಶ್ರಮವಹಿಸಿ ಬೆಳೆದ ಬೆಳೆ ಕೈಗೆ ಬಂದಿದ್ದು, ಬಾಯಿಗೆ ಬರದಂತಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd