ADVERTISEMENT
Thursday, November 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ತ್ರೇತಾಯುಗದ ರಾಮನಂತೆ ಮಾತಿಗೆ ತಪ್ಪದ ದಾಮೋದರ್ ದಾಸ್ ನರೇಂದ್ರ ಮೋದಿ

admin by admin
July 31, 2020
in International, Newsbeat
Share on FacebookShare on TwitterShare on WhatsappShare on Telegram

Related posts

ಕಂಠಿಹಾರ ಕಿತ್ತುಕೊಡಲು ನೀನೇನು ರಾಜನಾ? ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಧುಮುಕಿದ ನಟಿ ತಾರಾ, ಸಚಿವ ನರೇಂದ್ರ ಸ್ವಾಮಿಗೆ ಹಿಗ್ಗಾಮುಗ್ಗಾ ತರಾಟೆ!

ಕಂಠಿಹಾರ ಕಿತ್ತುಕೊಡಲು ನೀನೇನು ರಾಜನಾ? ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಧುಮುಕಿದ ನಟಿ ತಾರಾ, ಸಚಿವ ನರೇಂದ್ರ ಸ್ವಾಮಿಗೆ ಹಿಗ್ಗಾಮುಗ್ಗಾ ತರಾಟೆ!

November 26, 2026
ವಿನಯ್ ಕುಲಕರ್ಣಿ ಜಾಮೀನು ರದ್ದು; 2 ವಾರಗಳಲ್ಲಿ ಶರಣಾಗಲು ಸುಪ್ರೀಂ ಕೋರ್ಟ್ ಆದೇಶ

ವಿನಯ್ ಕುಲಕರ್ಣಿ ಜಾಮೀನು ರದ್ದು; 2 ವಾರಗಳಲ್ಲಿ ಶರಣಾಗಲು ಸುಪ್ರೀಂ ಕೋರ್ಟ್ ಆದೇಶ

November 26, 2026
ತ್ರೇತಾಯುಗದ ರಾಮನಂತೆ ಮಾತಿಗೆ ತಪ್ಪದ ದಾಮೋದರ್ ದಾಸ್ ನರೇಂದ್ರ ಮೋದಿ
ಅಯೋಧ್ಯೆ, ಜುಲೈ 31: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆಯನ್ನು ಮಾಡಲಿದ್ದಾರೆ. ಜೊತೆಗೆ ಅವರು ಈ ಹಿಂದೆ ಮಾಡಿದ ಮಾತನ್ನು ಸಹ ಈಡೇರಿಸಲಿದ್ದಾರೆ. ಇಂದಿಗೆ ಸರಿಯಾಗಿ 29 ವರ್ಷಗಳ ಹಿಂದೆ 1991ರಲ್ಲಿನ ರಾಮ ಮಂದಿರ ಚಳವಳಿಯ ಸಂದರ್ಭದಲ್ಲಿ  ಛಾಯಾಗ್ರಾಹಕರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ  ನಿರ್ಮಾಣ ಪ್ರಾರಂಭವಾಗುವ ದಿನ, ಪುನಃ ಬರುತ್ತೇನೆ ಎಂದು ಹೇಳಿದ್ದರು. 1991ರಲ್ಲಿ  ಮೋದಿ ಮತ್ತು ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಅವರು ಜೊತೆಗಿರುವ  ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಛಾಯಾಗ್ರಾಹಕ ಮಹೇಂದ್ರ ತ್ರಿಪಾಠಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ರಾಮ ಜನ್ಮಭೂಮಿ ಬಳಿ ಫೋಟೋ ಸ್ಟುಡಿಯೋ ನಡೆಸುತ್ತಿರುವ ಮಹೇಂದ್ರ ತ್ರಿಪಾಠಿ, ಅವರು 1991 ರಲ್ಲಿ ಮೋದಿಯವರ ಈ ಅಪರೂಪದ ಛಾಯಾಚಿತ್ರವನ್ನು ತೆಗೆದುಕೊಂಡಿದ್ದಾರೆ ಮತ್ತು ಆ ಸಮಯದಲ್ಲಿ ಅವರು ಮೋದಿಯವರೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ತ್ರಿಪಾಠಿ ಆ ದಿನವನ್ನು ನೆನಪಿಸಿಕೊಳ್ಳುತ್ತಾ,  ಮೋದಿಜೀ 1991 ರ ಏಪ್ರಿಲ್ ನಲ್ಲಿ ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಅವರೊಂದಿಗೆ ಅಯೋಧ್ಯೆಗೆ ಬಂದು ವಿವಾದಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ನಾನಾಗ  ಅಯೋಧ್ಯೆಯ ಏಕೈಕ ಛಾಯಾಗ್ರಾಹಕನಾಗಿದ್ದೆ ಮತ್ತು ವಿಎಚ್‌ಪಿ ಜೊತೆ ಸಂಬಂಧ ಹೊಂದಿದ್ದೆ. ಆ ಸಮಯದಲ್ಲಿ, ನಾನು ಈ ಫೋಟೋವನ್ನು ತೆಗೆದುಕೊಂಡಿದ್ದು, ಗುಜರಾತ್‌ ನ ಬಿಜೆಪಿ ನಾಯಕರು ಎಂದು ಜೋಶಿ  ಮೋದಿಜೀ ಯನ್ನು ಪತ್ರಕರ್ತರಿಗೆ ಪರಿಚಯಿಸಿದರು ಎಂದು ತ್ರಿಪಾಠಿ ಹೇಳಿದರು.
ನಾನು ಮತ್ತು ಸ್ಥಳೀಯ ಪತ್ರಕರ್ತರು ಮೋದಿಜೀ ಅವರನ್ನು ಪುನಃ ಯಾವಾಗ ಬರುತ್ತೀರಿ ಎಂದು ಕೇಳಿದಾಗ, ಅವರು ರಾಮ ಮಂದಿರದ ನಿರ್ಮಾಣ ಪ್ರಾರಂಭವಾಗುವ ದಿನ ನಾನು ಇನ್ನೊಮ್ಮೆ ಬರುತ್ತೇನೆ ಎಂದು ಉತ್ತರಿಸಿದರು. ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ  ನಂತರ ಆಗಸ್ಟ್ 5 ರಂದು ನಡೆಯುವ ಭೂಮಿ ಪೂಜ ಕಾರ್ಯಕ್ರಮದಲ್ಲಿ ಇದೀಗ  ಕಾಕತಾಳೀಯವಾಗಿ ಮೋದಿಜೀ ಭಾಗವಹಿಸುತ್ತಿದ್ದಾರೆ ಎಂದು ತ್ರಿಪಾಠಿ ಹೇಳಿದರು.
ಆದರೆ, ಭೂಮಿ ಪೂಜ ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸದಿರುವ ಬಗ್ಗೆ ಕೋಪಗೊಂಡಿರುವ ತ್ರಿಪಾಠಿ ಅವರು 1989 ರಿಂದ ವಿಶ್ವ ಹಿಂದೂ ಪರಿಷತ್ ಗಾಗಿ ಛಾಯಾಗ್ರಹಣ ಮಾಡುತ್ತಿದ್ದೇನೆ. ಅಯೋಧ್ಯೆಯ ತೀರ್ಪಿನಲ್ಲಿ ನನ್ನ ಛಾಯಾಚಿತ್ರಗಳು ಸಹ ಪ್ರಮುಖ ಪಾತ್ರವಹಿಸಿವೆ, ಇದರ ಹೊರತಾಗಿಯೂ ನನ್ನನ್ನು ಭೂಮಿ ಪೂಜ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ ಎಂದು ಹೇಳಿದರು.
Tags: AyodhyaBhoomipoojaindiakarnatakaLatestlatest-newspmnarendramodiRam janma bhoomi
ShareTweetSendShare
Join us on:

Related Posts

ಕಂಠಿಹಾರ ಕಿತ್ತುಕೊಡಲು ನೀನೇನು ರಾಜನಾ? ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಧುಮುಕಿದ ನಟಿ ತಾರಾ, ಸಚಿವ ನರೇಂದ್ರ ಸ್ವಾಮಿಗೆ ಹಿಗ್ಗಾಮುಗ್ಗಾ ತರಾಟೆ!

ಕಂಠಿಹಾರ ಕಿತ್ತುಕೊಡಲು ನೀನೇನು ರಾಜನಾ? ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಧುಮುಕಿದ ನಟಿ ತಾರಾ, ಸಚಿವ ನರೇಂದ್ರ ಸ್ವಾಮಿಗೆ ಹಿಗ್ಗಾಮುಗ್ಗಾ ತರಾಟೆ!

by Shwetha
November 26, 2026
0

ಬೆಂಗಳೂರು: ಮಾಸಿಕ 15 ಸಾವಿರ ರೂಪಾಯಿ ನಿಗದಿತ ಗೌರವಧನ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 9 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೀದಿಗಿಳಿದು...

ವಿನಯ್ ಕುಲಕರ್ಣಿ ಜಾಮೀನು ರದ್ದು; 2 ವಾರಗಳಲ್ಲಿ ಶರಣಾಗಲು ಸುಪ್ರೀಂ ಕೋರ್ಟ್ ಆದೇಶ

ವಿನಯ್ ಕುಲಕರ್ಣಿ ಜಾಮೀನು ರದ್ದು; 2 ವಾರಗಳಲ್ಲಿ ಶರಣಾಗಲು ಸುಪ್ರೀಂ ಕೋರ್ಟ್ ಆದೇಶ

by Shwetha
November 26, 2026
0

ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಹಾಗೂ ಜೀವಾವಧಿ ಶಿಕ್ಷೆ...

ಇನ್ನು 5ರಿಂದ 10 ವರ್ಷಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ಖಚಿತ: ಕೇವಲ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಸಾಲದು, ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯವೇ ಮದ್ದು- ಬಾಲಚಂದ್ರ ಜಾರಕಿಹೊಳಿ

ಇನ್ನು 5ರಿಂದ 10 ವರ್ಷಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ಖಚಿತ: ಕೇವಲ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಸಾಲದು, ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯವೇ ಮದ್ದು- ಬಾಲಚಂದ್ರ ಜಾರಕಿಹೊಳಿ

by Shwetha
November 26, 2026
0

ಬೆಳಗಾವಿ: ದಶಕಗಳ ಕಾಲದಿಂದಲೂ ಆಗಾಗ್ಗೆ ಮುನ್ನೆಲೆಗೆ ಬರುತ್ತಿರುವ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗಿಗೆ ಇದೀಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ಒಳಗಿನಿಂದಲೇ ಮತ್ತೆ ಹೊಸ ಬಲ...

ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಮೊಬೈಲ್, ಧ್ವನಿ ಮಾದರಿ ಎಫ್‌ಎಸ್‌ಎಲ್‌ಗೆ

ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಮೊಬೈಲ್, ಧ್ವನಿ ಮಾದರಿ ಎಫ್‌ಎಸ್‌ಎಲ್‌ಗೆ

by Shwetha
November 26, 2026
0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದ...

ಮೋದಿ ತೇಜಸ್ಸಿನ ಮುಂದೆ ಸೂರ್ಯನ ಬೆಳಕೂ ಮಂದ: ಪ್ರಧಾನಿಯನ್ನು ಹಾಡಿ ಹೊಗಳಿದ ಕಟ್ಟಾ ವಿರೋಧಿ ಜಿರಳೆ ದೀಪ್ಕೆ! ಈ ದಿಢೀರ್ ಜಪದ ಅಸಲಿ ರಹಸ್ಯವೇನು?

ಮೋದಿ ತೇಜಸ್ಸಿನ ಮುಂದೆ ಸೂರ್ಯನ ಬೆಳಕೂ ಮಂದ: ಪ್ರಧಾನಿಯನ್ನು ಹಾಡಿ ಹೊಗಳಿದ ಕಟ್ಟಾ ವಿರೋಧಿ ಜಿರಳೆ ದೀಪ್ಕೆ! ಈ ದಿಢೀರ್ ಜಪದ ಅಸಲಿ ರಹಸ್ಯವೇನು?

by Shwetha
November 26, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯಂಥ ವ್ಯಕ್ತಿ ಅಧಿಕಾರದಲ್ಲಿದ್ದರೆ ಮಾತ್ರ ದೇಶದ ಕಲ್ಯಾಣ ಸಾಧ್ಯ, ಮೋದಿ ಇದ್ದರೆ ಎಲ್ಲವೂ ಸಾಧ್ಯ (ಮೋದಿ ಹೈ ತೋ ಮುಮ್‌ಕಿನ್ ಹೈ). ಮೋದಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram