ನವದೆಹಲಿ: ಭಾರತದಲ್ಲಿ ನಿನ್ನೆ ಒಂದೇ ದಿನ 15 ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4.25 ಲಕ್ಷಕ್ಕೆ ಏರಿಕೆಯಾಗಿದೆ.
ವಿಶ್ವಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ನಾಗಾಲೋಟದಲ್ಲಿ ಓಡುತ್ತಿದ್ದು 90 ಲಕ್ಷ ಗಡಿ ದಾಟಿದೆ. ಇದೇ ಸ್ಥಿತಿ ಮುಂದುವರೆದರೆ ಒಂದೆರಡು ದಿನಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಒಂದು ಕೋಟಿ ದಾಟುವ ಸಾಧ್ಯತೆ ಇದೆ.
ಭಾನುವಾರ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸುಮಾರು 1.8 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆಯೂ 90 ಲಕ್ಷ ದಾಟಿದೆ. ಕಳೆದ ಡಿಸೆಂಬರ್‌ನಿAದ ಇಲ್ಲಿಯವರೆಗೆ ಮºಹಾಮಾರಿ ಕೊರೊನಾಗೆ 4 ಲಕ್ಷದ 64 ಸಾವಿರ ಮಂದಿ ಉಸಿರು ನಿಲ್ಲಿಸಿದ್ದಾರೆ.
ವಿಶ್ವದ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದೆ. ಇಲ್ಲಿ ಕೋವಿಡ್-19 ಸೋಂಕಿಗೆ ಇದುವರೆಗೆ 1,19,900 ಜನರು ಮೃತಪಟ್ಟಿದ್ದಾರೆ. ಜತೆಗೆ ಅಮೆರಿಕಾದ ಒಟ್ಟು ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ 22 ಲಕ್ಷ ದಾಟಿದೆ.
ಮಾರಕ ಕೊರೊನಾ ಮಾರಿಗೆ ಬ್ರೆಜಿಲ್‌ನಲ್ಲಿ 50 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಈ ಮುಖೇನ ಬ್ರೆಜಿಲ್ ಅತೀಹೆಚ್ಚು ಕೊರೋನಾ ಸಾವು ಕಂಡ ಜಗತ್ತಿನ 2ನೇ ರಾಷ್ಟçವಾಗಿದೆ.
ಗೋವಾದಲ್ಲಿ ಮೊದಲ ಬಲಿ
ದೇಶದಲ್ಲಿ ಅತಿ ಕಡಿಮೆ ಕೊರೊನಾ ಸೋಂಕಿತರನ್ನು ಹೊಂದಿದ್ದ ಗೋವಾ ರಾಜ್ಯದಲ್ಲಿ ಇಂದು ಕೊರೊನಾಗೆ ಮೊದಲ ಬಲಿ ಬಿದ್ದಿದೆ. ಗೊವಾದಲ್ಲಿ 754 ಪಾಸಿಟಿವ್ ಪ್ರಕರಣಗಳಿದ್ದು, ಇದರಲ್ಲಿ 129 ಮಂದಿ ಚಿಕಿತ್ಸೆ ಬಳಿಕ ಡಿಶ್ಚಾರ್ಜ್ ಆಗಿದ್ದಾರೆ. ಇನ್ನೂ 625 ಮಂದಿ ಸಕ್ರಿಯ ಪ್ರಕರಣಗಳಿದ್ದು, ವಿವಿಧ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.