ಫ್ರೆಂಚ್ ಓಪನ್ 2021- ಪ್ಯಾರಿಸ್ ನಲ್ಲಿ ಡನೀಲ್ ಮೆಡ್ವೆಡೇವ್ ಸರಸ ಸಲ್ಲಾಪ…!
ಪ್ಯಾರಿಸ್ ನ ರೋಲ್ಯಾಂಡ್ ಗ್ಯಾರೋಸ್ ಆವೆ ಮಣ್ಣಿನ ಅಂಗಣದಲ್ಲಿ ರಷ್ಯಾದ ಡನೀಲ್ ಮೆಡ್ವೆಡೇವ್ ಅವರ ಸರಸ ಸಲ್ಲಾಪ ಮುಂದುವರಿದಿದೆ. ಕ್ಲೇ ಕೋರ್ಟ್ ಅಂಗಣದಲ್ಲಿ ಎರಡು ಬಾರಿ ಫೈನಲ್ ಪ್ರವೇಶಿಸಿದ್ರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
ಆದ್ರೆ ಈ ಬಾರಿ ಪ್ರಶಸ್ತಿ ಗೆಲ್ಲಲೇಬೇಕು ಅನ್ನೋ ಹಠದಲ್ಲಿ ಆಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಡನೀಲ್ ಮೆಡ್ವೆಡೇವ್ ಅವರು 2021ರ ಫ್ರೆಂಚ್ ಓಪನ್ ಟೂರ್ನಿಯ ಸಿಂಗಲ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಎರಡನೇ ಶ್ರೇಯಾಂಕಿತ ಡನೀಲ್ ಮೆಡ್ವೆಡೇವ್ ಅವರು 6-2, 6-1, 7-5 ನೇರ ಸೆಟ್ ಗಳಿಂದ 22ನೇ ಶ್ರೇಯಾಂಕಿತತ ಚಿಲಿಯ ಕ್ರಿಸ್ಟಿಯಾನ್ ಗಾರಿನ್ ಅವರನ್ನು ಪರಾಭವಗೊಳಿಸಿದ್ರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡನೀಲ್ ಮೆಡ್ವೆಡೇವ್ ಅವರು ಗ್ರೀಕ್ ನ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಇನ್ನೊಂದು ಸಿಂಗಲ್ಸ್ ನಲ್ಲಿ ಗ್ರೀಕ್ ನ ಸ್ಟೆಫಾನೊಸ್ ಸಿಟ್ಸಿಪಾಸ್ ಅವರು 6-3, 6-2, 7-5ರಿಂದ ಸ್ಪೇನ್ ನ ಪಾಬ್ಲೋ ಕಾರೆನೊ ಅವರನ್ನು ನೇರ ಸೆಟ್ ಗಳಿಂದ ಮಣಿಸಿದ್ರು.
ಮತ್ತೊಂದು ಸಿಂಗಲ್ಸ್ ನಲ್ಲಿ ಅಲೆಕ್ಸಾಂಡರ್ ಝಿವೆರೆವ್ 6-4, 6-1, 6-1ರಿಂದ ನಿಶಿಕೊರಿ ಅವರನ್ನು ಸುಲಭವಾಗಿ ಮಣಿಸಿ ಕ್ವಾರ್ಟರ್ ಫೈನಲ್ ಗೆ ಎಂಟ್ರಿಯಾಗಿದ್ದಾರೆ.
ಇನ್ನುಳಿದಂತೆ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ರಫೆಲ್ ನಡಾಲ್ ಅವರು ಜಾನಿಕ್ ಸಿನ್ನೆರ್ ಅವರನ್ನು ಎದುರಿಸಲಿದ್ದಾರೆ. ಹಾಗೇ ನಂಬರ್ ವನ್ ಆಟಗಾರ ನೊವಾಕ್ ಜಾಕೊವಿಕ್ ಅವರು ಲಾರೆಂಜ್ ಮುಸೆಟಿ ವಿರುದ್ಧ ಆಡಲಿದ್ದಾರೆ.