ಫಿಲಂ ಚೇಂಬರ್ ಗೆ ಆಗಮಿಸಿದ ದರ್ಶನ್
ಬೆಂಗಳೂರು : ಟಾಲಿವುಡ್ ನ ಹೊಸ ನೀತಿಗಳ ವಿರುದ್ಧ ದರ್ಶನ್ ಸಿಡಿದೆದಿದ್ದು, ಈ ಬಗ್ಗೆ ದೂರು ನೀಡಲು ಫಿಲ್ಮ್ ಚೇಂಬರ್ ಕಚೇರಿಗೆ ಆಗಮಿಸಿದ್ದಾರೆ.
ಫಿಲಂ ಚೇಂಬರ್ ಗೆ ದೂರು ನೀಡುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲುಗು ಸಿನಿಮಾಗಳು ಕರ್ನಾಟಕದಲ್ಲಿ ಯಾವುದೇ ತೊಂದರೆ ಇಲ್ಲದೆ ರಿಲೀಸ್ ಆಗುತ್ತಿದೆ.
ಆದ್ರೆ ಆಂಧ್ರದಲ್ಲಿ ನಮ್ಮ ಸಿನಿಮಾಗಳಿಗೆ ತೊಂದರೆಯಾಗುತ್ತೆ. ನನ್ನ ಬಿಡಿ ನಂದು 50 ಸಿನಿಮಾ ಆಯ್ತು.
ಟಾಲಿವುಡ್ ನ ಈ ನಡೆಯಿಂದ ಮುಂದೆ ಯುವನಟರ ಸಿನಿಮಾಗಳಿಗೆ ಸಮಸ್ಯೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊರೊನಾ ಹಿನ್ನೆಲೆ ತೆಲುಗು ಸಿನಿಮಾ ಇಂಡಸ್ಟ್ರೀ ಈ ಹೊಸ ನಿಯಮಗಳನ್ನ ಜಾರಿ ಮಾಡಿಕೊಂಡಿದೆ.
ತೆಲುಗು ಸಿನಿಮಾ ಬಿಡುಗಡೆಯ ದಿನ ಬೇರೆ ಯಾವುದೇ ಪರಿಭಾಷೆಯ ಚಿತ್ರಗಳನ್ನು ರಿಲೀಸ್ ಮಾಡುವುದಿಲ್ಲ ಅಂತ ತಿಳಿಸಿದೆ.
ಈಗಾಗಿ ಮಾರ್ಚ್ 11ಕ್ಕೆ ರಿಲೀಸ್ ಆಗಬೇಕಿದ್ದ ರಾಬರ್ಟ್ ಸಿನಿಮಾಗೆ ಅಡ್ಡಿಯಾಗಿದೆ. ಈ ವಿಚಾರವಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷರೊಂದಿಗೆ ಚರ್ಚೆ ಮಾಡುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel