ಮತ್ತೆ ಒಂದಾಗ್ತಿದೆ ‘ಯಜಮಾನ’ ಚಿತ್ರದ ಟೀಮ್ : ಸಿನಿಮಾ ಚರ್ಚೆಯಲ್ಲಿ ದಚ್ಚು ಬ್ಯುಸಿ Darshan
ಬೆಂಗಳೂರು : ವಂಚನೆ ಪ್ರಕರಣಕ್ಕೆ ಫುಲ್ ಸ್ಟಾಪ್ ಇಟ್ಟಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಇದೀಗ ಸಿನಿಮಾ ಚರ್ಚೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ನಟ ದರ್ಶನ್ ಮನೆಗೆ ನಿರ್ದೇಶಕ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ, ನಿರ್ಮಾಪಕಿ ಶೈಲಜಾ ನಾಗ್ ಅವರು ಭೇಟಿ ನೀಡಿದ್ದಾರೆ.
ದರ್ಶನ್ ಶೈಲಜಾ ನಾಗ್ ಗೆ ಸಿನಿಮಾ ಡೇಟ್ಸ್ ಕೊಟ್ಟಿದ್ದು, ಸಿನಿಮಾ ಕುರಿತು ಚರ್ಚಿಸಲು ಮನೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ವಿ ಹರಿಕೃಷ್ಣ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಸಿನಿಮಾ ಮಾಡಿದ್ದರು.
ಚಿತ್ರ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.