ಚಕ್ರವ್ಯೂಹದಲ್ಲಿ ‘ಚಕ್ರವರ್ತಿ’ ‘ಬರ್ದರ್ ಫ್ರಮ್ ಅನದರ್ ಮದರ್’ ಅಂದೋರು ಎಲ್ಲಿ ಹೋದ್ರು..?
ನಟ ದರ್ಶನ್ ಅವರು ಕಳೆದೊಂದು ವಾರದಿಂದಲೂ ಸುದ್ದಿಯಲ್ಲಿಯೇ ಇದ್ದಾರೆ.. ಒಮ್ಮೆ 25 ಕೋಟಿ ವಂಚನೆ ಕೇಸ್ ನಲ್ಲಿ ಉಮಾಪತಿ ಅವರ ಜೊತೆಗೆ ಸುದ್ದಿಯಾದ್ರೆ , ಇದೀಗ ‘ಇಂದ್ರಜಾಲ’ದಲ್ಲಿ ಸಿಲುಕಿ ಸುದ್ದಿಯಾಗಿದ್ದಾರೆ.. ಅಂದ್ರೆ ನಿರ್ದೇಶಕ , ನಿರ್ಮಾಪಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಮೈಸೂರಿನ ಪ್ರಿನ್ಸ್ ಸಂದೇಶ್ ಹೋಟೆಲ್ ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರೋದಾಗಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ದರ್ಶನ್ ಅವರು ಸುದ್ದಿಯಾಗ್ತಿದ್ದಾರೆ..
ಈ ನಡುವೆ ಡಿ ಬಾಸ್ ಪರ ಅಭಿಮಾನಿಗಳು , ಕೆಲ ಸೆಲೆಬ್ರಿಟಿಗಳು , ರಾಜಕಾರಣಿಗಳು ಬೆಂಬಲಕ್ಕೆ ನಿಂತಿದ್ದಾರೆ.. ಆದ್ರೆ ಹಲವರು ದರ್ಶನ್ ಅವರ ಹೇಳಿಕೆಗಳ ವಿರುದ್ಧ ಬೇಸರ ಹೊರಹಾಕುತ್ತಿದ್ದಾರೆ.. ಸ್ನೇಹಾನಾ – ಪ್ರೀತಿನಾ, ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಡಿ ಬಾಸ್ ಪರ ನಿಂತಿದ್ದಾರೆ. ಅಷ್ಟೇ ಅಲ್ಲ ಯುವ ನಟ ಧನ್ವೀರ್, ಶಿವರಾಜ್ ಕೆ ಆರ್ ಪೇಟೆ, ಸಂಸದ ಪಿಸಿ ಮೋಹನ್, ಸಚಿವ ಬಿಸಿ ಪಾಟೀಲ್, ಆಪ್ತ ಗೆಳೆಯ ವಿನೋದ್ ಪ್ರಭಾಕರ್ ಸೇರಿದಂತೆ ಅನೇಕರು ದಾಸನ ಪರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನ ಹಾಕಿ ಬೆಂಬಲಿಸಿದ್ದಾರೆ..
ಆದ್ರೆ ದರ್ಶನ್ ಆಪ್ತಮಿತ್ರರಾದ ಸೃಜನ್ ಲೋಕೇಶ್ ಅವರೇ ಇನ್ನೂವರೆಗೂ ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡದೇ ಇರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಿದೆ.. ಅಷ್ಟೇ ಅಲ್ಲ ಅಣ್ಣ ದರ್ಶನ್ ಸಂಕಷ್ಟದಲ್ಲಿದ್ರು ಸಹೋದರ ದಿನಕರ್ ತೂಗುದೀಪ್ ಅವರು ಕೂಡ ಬೆಂಬಲ ನೀಡದೇ ಕೈಕೊಟ್ರಾ ಅನ್ನೋ ಮಾತುಕತೆಗಳು ಆರಂಭವಾಗಿದೆ..