ಬೆಂಗಳೂರು : ಲಾಕ್ ಡೌನ್ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ನೆಚ್ಚಿನ ಪ್ರಾಣಿ, ಪಕ್ಷಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ. ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ದಾಸ ಮಗುವಿಗೆ ಕೈ ತುತ್ತು ತಿನ್ನಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ವಿಡಿಯೋದಲ್ಲಿ ದರ್ಶನ್ ಅವರು ತಮ್ಮ ತೊಡೆಯ ಮೇಲೆ ಪುಟ್ಟ ಕಂದಮ್ಮನನ್ನು ಕೂರಿಸಿಕೊಂಡು ಕೈ ತುತ್ತು ತಿನ್ನಿಸಿದ್ದಾರೆ. ಅಲ್ಲದೇ ಮಗುವಿನ ಜೊತೆ ಸ್ವಲ್ಪ ಸಮಯ ಆಟ ಕೂಡ ಆಡಿರುವುದನ್ನು ಕಾಣಹುದಾಗಿದೆ.
ಇತ್ತೀಚೆಗೆ ‘ಕಮರೊಟ್ಟು ಚೆಕ್ ಪೋಸ್ಟ್’ ಸಿನಿಮಾ ನಿರ್ಮಾಪಕ ಚೇತನ್ ರಾಜ್ ಅವರ ಮನೆಗೆ ಭೇಟಿ ನೀಡಿದ್ದ ದರ್ಶನ್, ಚೇತನ್ ರಾಜ್ ಮಗುವಿನ ಜೊತೆ ಕಾಲಕಳೆದಿದ್ದಾರೆ. ಚೇತನ್ ರಾಜ್ ‘ಜಯಮ್ಮನ ಮಗ’, ‘ಜೈ ಮಾರುತಿ 800’ ಸಿನಿಮಾಗಳ ನಿರ್ಮಾಪಕ ರಮೇಶ್ ಅವರ ಅಳಿಯರಾಗಿದ್ದು, ದರ್ಶನ್ ಬಹುಕಾಲದ ಗೆಳೆಯರಾಗಿದ್ದಾರೆ.