ಹಾವೇರಿ:ನಟ ದರ್ಶನ್ (Darshan) ಮಾಡಿರುವ ತಪ್ಪಿಗೆ ಜೈಲು ಪಾಲಾಗಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ (Zameer Ahmed) ಪ್ರಶ್ನಿಸಿದ್ದಾರೆ.
ಹಾವೇರಿಯಲ್ಲಿ (Haveri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರನ್ನೇ ಜೈಲಿಗೆ ಹಾಕೋದು. ತಪ್ಪು ಮಾಡಿದ್ದಕ್ಕೆ ದರ್ಶನ್ ಜೈಲು ಪಾಲಾಗಿದ್ದಾರೆ. ನಾನು, ದರ್ಶನ್ ಆತ್ಮೀಯ ಸ್ನೇಹಿತರು. ಆದರೆ, ಅವರಿಗೆ ಜೈಲಿನಲ್ಲಿ ಯಾವುದೇ ಸಹಾಯ ಮಾಡಿಲ್ಲ. ನನ್ನ ಪ್ರಭಾವ ನಡೆದಿಲ್ಲ ಎಂದು ಹೇಳಿದ್ದಾರೆ.
ವಕ್ಫ್ ಆಸ್ತಿ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರದಲ್ಲಿ ಸಾಕಷ್ಟು ತೊಂದರೆ ಇರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ವಕ್ಫ್ ಅದಾಲತ್ ಹಮ್ಮಿಕೊಂಡಿದ್ದೇವೆ. ಮುಡಾ ಹಗರಣಕ್ಕೂ ಸಿದ್ದರಾಮಯ್ಯ ಅವರಿಗೆ ಏನೂ ಸಂಬಧ ಇಲ್ಲ. ಇದಕ್ಕೂ ಸಿದ್ದರಾಮಯ್ಯಗೂ ಲಿಂಕ್ ಇಲ್ಲ. ಸಂಗೊಳ್ಳಿ ರಾಯಣ್ಣನನ್ನು ನಮ್ಮವರೇ ಹಿಡಿದುಕೊಟ್ಟರು ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಶತ್ರುಗಳು ಮನುಷ್ಯನಿಗೆ ಇರುವುದು ಸಹಜ. ಎಲ್ಲರಿಗೂ ಶತ್ರುಗಳು ಇರುತ್ತಾರೆ. ನನ್ನ ಜೊತೆನೇ ಇರುತ್ತಾರೆ. ಯಾರು ಶತ್ರು ಅಂತಾ ಗೊತ್ತಾಗುತ್ತೆ? ಯಾರು ಸ್ನೇಹಿತರು ಅಂತಾ ಗೊತ್ತಾಗುತ್ತೆ? ಆ ಲೆಕ್ಕದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಹೇಳಿದ್ದಾರೆ.