“ದರ್ಶನ್ ವಿಚಲಿತರಾಗಿದ್ದಾರೆ, ಬಡವನಿಗೆ ಹೊಡೆದಿಲ್ಲ ಅಂದ್ರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಲಿ” – ಇಂದ್ರಜಿತ್
ಬೆಂಗಳೂರು: ನಟ ದರ್ಶನ್ ಅವರು ಕಳೆದೊಂದು ವಾರದಿಂದಲೂ ಸುದ್ದಿಯಲ್ಲಿಯೇ ಇದ್ದಾರೆ.. ಒಮ್ಮೆ 25 ಕೋಟಿ ವಂಚನೆ ಕೇಸ್ ನಲ್ಲಿ ಉಮಾಪತಿ ಅವರ ಜೊತೆಗೆ ಸುದ್ದಿಯಾದ್ರೆ , ಇದೀಗ ‘ಇಂದ್ರಜಾಲ’ದಲ್ಲಿ ಸಿಲುಕಿ ಸುದ್ದಿಯಾಗಿದ್ದಾರೆ.. ಅಂದ್ರೆ ನಿರ್ದೇಶಕ , ನಿರ್ಮಾಪಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಮೈಸೂರಿನ ಪ್ರಿನ್ಸ್ ಸಂದೇಶ್ ಹೋಟೆಲ್ ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರೋದಾಗಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ದರ್ಶನ್ ಅವರು ಸುದ್ದಿಯಾಗ್ತಿದ್ದಾರೆ..
ಈ ನಡುವೆ ಮತ್ತೆ ದರ್ಶನ್ ಬಗ್ಗೆ ಮಾತನಾಡಿರುವ ಇಂದ್ರಜಿತ್ ನಾನು ಅವರು ಮಾತನಾಡಿದ್ದನ್ನ ನೋಡಿದ್ದೇನೆ. ಅವರು ತುಂಬಾ ವಿಚಲಿತರಾಗಿದ್ದಾರೆ. ಮೊದಲು ನನ್ನ ಪ್ರಶ್ನೆಗಳಿಗೆ ಅವರು ಉತ್ತರ ಕೊಡಲಿ ಎಂದಿದ್ದಾರೆ..
ಹೋಟೆಲಿನಲ್ಲಿ ನೀವು ಬಡವ ಸಪ್ಲೇಯರ್ ಗೆ ಹೊಡೆದ್ರೋ ಇಲ್ಲವೋ, ಅಂದು ನೀವು ಯಾರ ಜೊತೆಗಿದ್ರಿ, 25 ಕೋಟಿ ಡೀಲ್ ವಿಚಾರ ಸಂಬಂಧ ನೀವು ಅರುಣಾ ದೇವಿಯನ್ನು ಯಾಕೆ ತೋಟಕ್ಕೆ ಕರೆದ್ರಿ, ಮೊದಲು ನನ್ನ ಈ ಪ್ರಶ್ನೆಗಳಿಗೆ ಉತ್ತರ ನೀಡಿ. ಅಲ್ಲದೆ ಬಡವನಿಗೆ ಹೊಡೆದಿಲ್ಲ ಅಂದ್ರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿ ಎಂದು ಚಾಲೆಂಜ್ ಹಾಕಿದ್ದಾರೆ.
ಅಲ್ಲದೇ ದರ್ಶನ್ ಅವರು ಈ ಸಂದರ್ಭದಲ್ಲಿ ವಿಚಲಿತರಾಗಬೇಕಾಗಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಸಾಕು. ಅವರು ಇಂದು ಬಳಸಿರುವ ಭಾಷೆ ಅವರ ಹಿನ್ನೆಲೆ ತೋರಿಸುತ್ತದೆ. ನಾನು ಅವರನ್ನು ಅನ್ ಎಜುಕೇಟೆಡ್ ಅಂತ ಹೇಳಿಲ್ಲ. ರಾಜ್ ಕುಮಾರ್ ನಡೆದು ಬಂದ ದಾರಿ, ಭಾಷೆ, ಸಿನಿಮಾ, ನಟನೆಯ ಬಗ್ಗೆ ಇರುವ ಕಾಳಜಿ ಇಡೀ ದೇಶಕ್ಕೆ ಗೊತ್ತಿದೆ ಎಂದಿದ್ದಾರೆ.
ಅಲ್ಲದೇ ಡಿಸ್ಟರ್ಬ್ ಆಗಿದ್ರೆ ಟ್ರೀಟ್ಮೆಂಟ್ ತಗೋಳಿ ದರ್ಶನ್ ಅವರೇ. ಆಡಿಯೋ, ವೀಡಿಯೋ ಸಾಕ್ಷ್ಯಗಳನ್ನು ಪೊಲೀಸರ ಮುಂದೆ ತೋರಿಸುತ್ತೇವೆ. ಇವರ ಮುಂದಿಡುವ ಅವಶ್ಯಕತೆ ಇಲ್ಲ. ಮಹಿಳೆಗೆ ಬೆದರಿಕೆ ಹಾಗೂ ಸಪ್ಲೇಯರ್ ಗೆ ಹೊಡೆದಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು ಎಂದಾಗ ಇಷ್ಟೊಂದು ವಿಚಾರಗಳು ಹೊರ ಬಂದಿದೆ. ಇನ್ನೂ ಕೂಡ ಎಷ್ಟೊಂದು ವಿಚಾರಗಳು ಹೊರ ಬರುತ್ತವೆ ಎಂದು ದರ್ಶನ್ ಈಗಾಗಲೇ ವಿಚಲಿತರಾಗಿ ಮಾತನಾಡಿದ್ದಾರೆ ಎಂದಿದ್ದಾರೆ.
ಇದೇ ವೇಲೆ ಗಂಡಸ್ತನದ ಬಗ್ಗೆ ಸಸವಾಲಾಕಿದ್ದಕ್ಕೆ ಪ್ರತಿಕ್ರಿಯಿಸಿರುವ ಇಂದ್ರಜಿತ್, ಗಂಡಸಾಗಿರುವುದನ್ನು ಪ್ರೂವ್ ಮಾಡೋಕೆ ಹೇಳಿದ್ದಾರೆ. ಅವರ ಈ ಮಾತಿನಿಂದ ನನಗೆ ನಗು ಬರುತ್ತೆ. ಬಡವ ಸಪ್ಲೆಯರ್‍ಗೆ ಹೊಡೆದಿದ್ದೀರಾ ಎಂಬುದಕ್ಕೆ ಉತ್ತರ ಕೊಡಿ. ಅವರಿಗೆ ಹೊಡೆಯುವುದು ಎಷ್ಟು ಸರಿ, ಅರುಣಾ ದೇವಿಯರನ್ನು ಮನೆಗೆ ಕರೆಸಿಕೊಂಡ್ರೋ, ಇಲ್ಲವೋ, ಹೇಳಿ. 25 ಕೋಟಿ ಡೀಲ್ ಹಿನ್ನೆಲೆ ಬಗ್ಗೆ ಹೇಳಿ ಎಂದು ಒತ್ತಾಯಿಸಿದ್ದಾರೆ.
ಧರ್ಮಪತ್ನಿ ವಿಚಾರದಲ್ಲಿ ಯಾಕೆ ಲಾಯರ್ ಕರೆಸಿಕೊಂಡ್ರಿ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು. ಇದೆಲ್ಲ ಹೀರೋಯಿಸಂ, ಇದನ್ನು ಸಿನಿಮಾದಲ್ಲಿ ಇಟ್ಟುಕೊಳ್ಳಿ. ನನಗೆ ಸಂಸ್ಕಾರ, ಸಂಸ್ಕೃತಿ ಇದೆ. ಗಾಂಡುಗಿರಿ ಅಲ್ಲ ಗೂಂಡಾಗಿರಿ ಅಂದಿದ್ದು, ಮೊದಲು ಕನ್ನಡ ಸರಿಯಾಗಿ ಓದಲು ಹೇಳಿ. ಅನ್ ಎಜುಕೇಟೆಡ್ ಅಂತ ಎಲ್ಲಿ ಹೇಳಿದ್ದೀನಿ, ಸೆಲೆಬ್ರಿಟಿ ಮೊದಲು ಮಾದರಿಯಾಗಲಿ. ಈ ರೀತಿ ಮಾಡುವುದಲ್ಲ. ಅಲ್ಲದೆ ತಲೆ ಸೀಳ್ತೀನಿ ಅನ್ನೋದು ಸರಿಯಲ್ಲ ಅನ್ನೋ ಅರ್ಥ ಬರುವಂತೆ ಹೇಳಿದ್ದೇನೆ ಎಂದಿದ್ದಾರೆ.