ಅನೇಕಲ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿತ್ರನಟ ದರ್ಶನ್ ರನ್ನು ಇಂದು ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ಮಾಡಿ ವಿಚಾರಿಸಿದ್ದಾರೆ.
ಭೇಟಿಯ ನಂತರ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ದರ್ಶನ್ ಹಾಗೂ ನನ್ನ ಮಧ್ಯೆ ಹಲವು ವರ್ಷಗಳಿಂದ ಸ್ನೇಹವಿದೆ. ಅವರನ್ನು ನೋಡಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದೆ. ಇವತ್ತು ಸಿಕ್ಕಿತ್ತು. ಹೋಗಿ ಮಾತನಾಡಿದೆ ಎಂದು ಹೇಳಿದ್ದಾರೆ. ಇಬ್ಬರು ಸ್ನೇಹಿತರ ನಡುವೆ ನಡೆಯುವ ಸಂಭಾಷಣೆ ನಮ್ಮಿಬ್ಬರಲ್ಲಿ ಇತ್ತು. ನಾವು ಮಾತನಾಡುತ್ತಿದ್ದ ವೇಳೆ ದರ್ಶನ್ ಅವರು ಸೆಷನ್ಸ್ ನಡೆಯುತ್ತಿರುವ ಬಗ್ಗೆ ಕೇಳಿದರು. ಅವರ ಊಟ, ಅರೋಗ್ಯ ಮತ್ತು ದಿನಚರಿಯ ಕುರಿತು ನಾನು ಕೇಳಿದೆ. ಅವರು ಪುಸ್ತಕಗಳನ್ನು ಓದುತ್ತಿದ್ದಾರೆ. ಒಂದಷ್ಟು ಪುಸ್ತಗಳನ್ನು ಅವರಿಗೆ ಕೊಟ್ಟೆವು, ಬೆಳಗಿನ ಸಮಯದಲ್ಲಿ ಯೋಗ ಮಾಡುತ್ತಿರಬಹುದು. ಆದರೆ, ನಾನು ಆ ಕುರಿತು ಕೇಳಲಿಲ್ಲ ಎಂದು ಹೇಳಿದ್ದಾರೆ.








