‘ಇಂದ್ರಜಾಲ’ಕ್ಕೆ ಸಿಲುಕಿರುವ ‘ದಾಸ’ – ಲಂಕೇಶ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ
ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿರುವ ನಿರ್ದೇಶಕ, ನಿರ್ಮಾಪಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಇತ್ತೀಚೆಗೆ ದರ್ಶನ್ ವಿರುದ್ಧ ವಾಗ್ದಾಳಿ ನಡೆಸೋ ಭರದಲ್ಲಿ ದಲಿತ ಪದವನ್ನ ಪದೇ ಪದೇ ಬಳಸಿ ಸಮುದಾಯ ಇತ್ತಿ ಕುಟ್ಟುವ ಪ್ರಯತ್ನ ಮಾಡ್ತಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಗೃಹ ಸಚಿವರ ಬಳಿ ದೂರು ಸಲ್ಲಿಸಲಾಗಿತ್ತು..
ಇದೀಗ ಲಂಕೇಶ್ ವಿರುದ್ಧ ದೊಡ್ಡಬಳ್ಳಾಪುರದಲ್ಲಿ ದೂರು ದಾಖಲಾಗಿದೆ.. ನಟ ದರ್ಶನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿರುವ ನಿರ್ದೇಶಕ-ಪತ್ರಕರ್ತ ಇಂದ್ರಜಿತ್ ಲಂಕೇಶ್ ವಿರುದ್ಧ ನಟನ ಡಿ ಬಾಸ್ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ದರ್ಶನ್ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಲಾಗುತ್ತಿದೆ, ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ, ಇಂದ್ರಜಿತ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ದರ್ಶನ್ ವಿರುದ್ಧ ಅವಹೇಳನ ಮಾಡಿ, ದಲಿತರ ಮೇಲೆ ಹಲ್ಲೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಉಲ್ಲೇಖಿಸಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ‘ಕರುನಾಡ ಕಲಾಚಕ್ರವರ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ’ದ ವತಿಯಿಂದ ದೂರು ದಾಖಲಿಸಲಾಗಿದೆ.
ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಯಾರೂ ದೂರು ನೀಡಿಲ್ಲ. ಆದರೂ ಇಂದ್ರಜಿತ್ ಲಂಕೇಶ್ ಮಾತ್ರ ಆರೋಪ ಮಾಡ್ತಿದ್ದಾರೆ. ಅದಕ್ಕೆ ದಾಖಲೆ, ಸಾಕ್ಷ್ಯ ಸಹ ಒದಗಿಸಿಲ್ಲ. ಹೋಟೆಲ್ ಸಿಬ್ಬಂದಿ ದಲಿತ ಎಂದು ಬಿಂಬಿಸುವ ಮೂಲಕ ಕೋಮು ದ್ವೇಷ ಹರಡಿಸುವ ಪ್ರಯತ್ನ ನಡೆದಿದೆ. ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಉದ್ದೇಶಪೂರ್ವಕ ತಯಾರಿ ನಡೆಸಿ ದರ್ಶನ್ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಕು ಹಾಗೂ ತೇಜೋವಧೆ ಮಾಡಬೇಕು ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.
“ ಭಾರತ ರತ್ನ ನಮ್ಮ ತಂದೆಯ ಕಾಲಿನ ಧೂಳಿಗೂ ಸಮವಿಲ್ಲ , ಎ.ಆರ್.ರೆಹಮಾನ್ ಯಾರೆಂದು ಗೊತ್ತಿಲ್ಲ”
ದಿವ್ಯಾ ಉರುಡುಗ ಜೊತೆ ಮಾತು ಬಿಟ್ಟ ಅರವಿಂದ್ – ಪ್ರಣಯ ಪಕ್ಷಿಗಳ ನಡುವೆ ಮುನಿಸ್ಯಾಕೆ..?