ದಿವ್ಯಾ ಉರುಡುಗ ಜೊತೆ ಮಾತು ಬಿಟ್ಟ ಅರವಿಂದ್ – ಪ್ರಣಯ ಪಕ್ಷಿಗಳ ನಡುವೆ ಮುನಿಸ್ಯಾಕೆ..?  

1 min read

ದಿವ್ಯಾ ಉರುಡುಗ ಜೊತೆ ಮಾತು ಬಿಟ್ಟ ಅರವಿಂದ್ – ಪ್ರಣಯ ಪಕ್ಷಿಗಳ ನಡುವೆ ಮುನಿಸ್ಯಾಕೆ..?

ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಮನೆಯಲ್ಲಿ ಪ್ರಣಯ ಪಕ್ಷಿಗಳಂತೆ   ಇರುವ  ಕ್ಯೂಟ್ ಕಪಲ್ ಅರವಿಂದ್ ಹಾಗೂ ದಿವ್ಯಾ ಉರುಡುಗ 2ನೇ ಇನ್ನಿಂಗ್ಸ್ ನಲ್ಲಿಯೂ ಸದಾ ಒಟ್ಟಾಗಿ ಕಾಣಿಸಿಕೊಳ್ತಾರೆ. ಆದ್ರೆ ಇದೀಗ  ದಿವ್ಯಾ ಉರುಡುಗ ಹಾಗೂ ಅರವಿಂದ್ ನಡುವೆ ಜಗಳ ನಡೆದಿದೆ. ಆದ್ರೆ ಇದು ಅಷ್ಟು ಸಸೀರಿಯಸ್ ಏನಲ್ಲ ಸಣ್ಣ ಜಗಳದಿಂದಾಗಿ  ಅರವಿಂದ್ ದಿವ್ಉಆ ಉರುಡುಗ ಜೊತೆ ಮಾತು ಬಿಟ್ಟಿದ್ದಾರೆ. ದೊಡ್ಮನೆಯಲ್ಲಿ ಟಾಸ್ಕ್ ಗಳ ವಿಚಾರ ಅಥವ , ಟಫ್ ಕಾಂಪಿಟೇಟರ್ ಅಂತ ಬಂದ್ರೆ ದಿವ್ಯಾ ಹಾಗೂ ಅರವಿಂದ್ ಇಬ್ಬರೂ ಸ್ಟ್ರಾಂಗ್ ಕಂಟೆಂಡರ್ ಗಳೇ.. ಹಾಗೆಯೇ ಆಟದ ವಿಚಾರವಾಗಿ ಇಬ್ಬರ ನಿಲುವು ಕೂಡ ಭಿನ್ನವಾಗಿರುತ್ತೆ.. ಏಕಾಂಗಿಯಾಗಿಯೇ ಇಬ್ಬರು ತಮ್ಮ ತಮ್ಮ ಸ್ಟ್ರಾಟರ್ಜಿಗಳನ್ನ ಯೂಸ್ ಮಾಡಿ ಗೆಲ್ಲುತ್ತಾರೆ.. biggboss kannada 8 saakshatv

ಬಿಗ್ ಬಾಸ್ ನೀಡಿದ್ದ ಮುತ್ತು ಹುಡುಕುವ ಟಾಸ್ಕ್ ವೇಳೆ ವಿಸಿಲ್ ಹಾಕುವುದಕ್ಕೂ ಮುನ್ನವೇ ಶುಭಾ ಪೂಂಜಾ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಗೌಡ ಗ್ಲೌಸ್‍ಗಾಗಿ ಕಾದು ನಿಂತಿರುತ್ತಾರೆ. ಈ ವೇಳೆ ಗಾರ್ಡನ್ ಏರಿಯಾದಲ್ಲಿಯೇ ಕುಳಿತಿದ್ದ ಅರವಿಂದ್, ಬೇರೆ ಕಡೆ ಯಾವುದು ಸರಿ, ಯಾವುದು ತಪ್ಪು ಎಂದು ಮಾತನಾಡುತ್ತೀರಾ, ಆದರೆ ಇಲ್ಲಿ ಮಾತ್ರ ಟಾಸ್ಕ್ ಮುನ್ನವೇ ಹೋಗಿ ನಿಂತುಕೊಂಡು ಗ್ಲೌಸ್‍ಗೆ ಕಾಯುತ್ತಿದ್ದೀರಾ. ಬೇರೆ ಕಡೆ ಇದು ಒಳ್ಳೆಯದು, ಇದು ತಪ್ಪು ಅಂತ ಹೇಳುವುದಕ್ಕೆ ಆಗುತ್ತದೆ. ಈಗ ಅಲ್ಲಿ ನಿಂತಿರುವುದು ಮಾತ್ರ ಸರಿನಾ ಎಂದು ಪ್ರಶ್ನಿಸುತ್ತಾರೆ.  ಈ ವೇಳೆ ಶುಭಾ ಬಿಟ್ಟು ಕೊಡೋಣಾ ಎಂದು ದಿವ್ಯಾ ಉರುಡುಗರನ್ನು ಕೇಳುತ್ತಾರೆ. ಆಗ ದಿವ್ಯಾ ಉರುಡುಗ ನಾನು ಬಿಟ್ಟು ಕೊಡುವುದಿಲ್ಲ. ನಾನು ಯಾಕೆ ಬಿಟ್ಟು ಕೊಡಬೇಕು, ಬೇಕಾದರೆ ಅವರು ಬಂದು ಆಡಲಿ ಎಂದು ಹೇಳುತ್ತಾರೆ. ಆಗ ಅರವಿಂದ್ ಏನು ಸ್ವಲ್ಪ ಜೋರಾಗಿ ಹೇಳು ಎಂದು ಕೇಳುತ್ತಾರೆ. ಅದಕ್ಕೆ ದಿವ್ಯಾ ಉರುಡುಗ ಬಿಟ್ಟು ಕೊಡು ಎಂದು ಹೇಳಿದರು. ಆದರೆ ನಾನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದೆ ಎನ್ನುತ್ತಾರೆ.biggboss kannada 8 saakshatv

ಇದರಿಂದ ಬೇಸರಗೊಂಡ ಅರವಿಂದ್, ದಿವ್ಯಾ ಉರುಡುಗ ಜೊತೆ ಎಷ್ಟೋ ಹೊತ್ತಿನವರೆಗೂ ಮಾತನಾಡಿರಲಿಲ್ಲ. ಕೊನೆಗೆ ದಿವ್ಯಾ ಉರುಡುಗ ಅರವಿಂದ್ ಬಳಿ ಹೋಗಿ ಏನಾಯಿತು ಎಂದಾಗ ಏನೂ ಇಲ್ಲ ಎಂದು ಅರವಿಂದ್ ಹೇಳುತ್ತಾರೆ. ಮತ್ತೆ ಯಾಕೆ ಮಾತನಾಡುತ್ತಿಲ್ಲ ಎಂದು ಕೇಳಿದಾಗ, ನಾನು ನನಗೆ ಟೈಮ್ ಕೊಟ್ಟುಕೊಂಡಿದ್ದೇನೆ. ಆರಾಮಾಗಿ ಯೋಚಿಸುತ್ತಾ ಕುಳಿತುಕೊಂಡಿದ್ದೇನೆ ಎನ್ನುತ್ತಾರೆ. ಹಾಗಾದರೆ ಇಷ್ಟ ಇಲ್ವಾ ಮಾತನಾಡಲು ಅಂತ ದಿವ್ಯಾ ಎಂದಾಗ ಅರವಿಂದ್ ಸದ್ಯಕ್ಕೆ ಇಷ್ಟ ಇಲ್ಲ ಎಂದಿದ್ದಾರೆ. ಇದರಿಂದ ಬೇಸರಗೊಂಡು ದಿವ್ಯಾ ಉರುಡುಗ ಏನು ಮಾತನಾಡದೇ ಎದ್ದು ಬೆಡ್ ರೂಮ್ ಕಡೆಗೆ ಹೋಗುತ್ತಾರೆ.biggboss kannada 8 saakshatv

“ ಭಾರತ ರತ್ನ ನಮ್ಮ ತಂದೆಯ ಕಾಲಿನ ಧೂಳಿಗೂ ಸಮವಿಲ್ಲ , ಎ.ಆರ್.ರೆಹಮಾನ್ ಯಾರೆಂದು ಗೊತ್ತಿಲ್ಲ”

“ಥೀಯೇಟರ್ ಗಳಲ್ಲಿ 100 %ಅವಕಾಶ ಸಿಗಲಿ ಮೊದಲು ಬರೋದು ನಾವೇ”..! ಸಲಗ ರಿಲೀಸ್ ಡೇಟ್ ಬಹಿರಂಗ..!  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd