“ಥೀಯೇಟರ್ ಗಳಲ್ಲಿ 100 %ಅವಕಾಶ ಸಿಗಲಿ ಮೊದಲು ಬರೋದು ನಾವೇ”..! ಸಲಗ ರಿಲೀಸ್ ಡೇಟ್ ಬಹಿರಂಗ..!  

1 min read

“ಥೀಯೇಟರ್ ಗಳಲ್ಲಿ 100 %ಅವಕಾಶ ಸಿಗಲಿ ಮೊದಲು ಬರೋದು ನಾವೇ”..! ಸಲಗ ರಿಲೀಸ್ ಡೇಟ್ ಬಹಿರಂಗ..!

ಕೊರೊನಾ ಹಾವಳಿ ಕಡಿಮೆಯಾಗಿ ಲಾಕ್ ಡೌನ್  ಮುಗಿದು ಸಹಜ ಸ್ಥಿತಿಗೆ ಮರಳುತ್ತಿರುವ ನಡುವೆ ಥಿಯೇಟರ್ ಗಳು ಓಪನ್ ಆಗಿವೆ.. ಆದ್ರೆ 50 % ಮಾತ್ರವೇ ಅವಕಾಶ ನೀಡಲಾಗಿದೆ.. ಈ ನಡುವೆ ಈ ಹಿಂದೆಯೇ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದ ಸಿನಿಮಾಗಳು ಮತ್ತೊಮ್ಮೆ ಹೊಸ ಡೇಟ್ ಗಳನ್ನ ಘೋಷಣೆ ಮಾಡಲು ಶುರು ಮಾಡಿವೆ..   ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷೆಯ ಭಜರಂಗಿ 2 ರಿಲೀಸ್ ಡೇಟ್ ಅನೌನ್ಸ್ ಆಗಿದೆ.. ಗಣಪತಿ ಹಬ್ಬ ಅಂದ್ರೆ ಸೆಪ್ಟೆಂಬರ್ 2 ಕ್ಕೆ ಸಿನಿಮಾ ರಿಲೀಸ್ ಆಗೋದು ಅಧಿಕೃತವಾಗಿ ಘೋಷಣೆಯಾಗಿದೆ.

“ಸೆಕ್ಸ್ ರಾಕೆಟ್ ನ ಮಾಸ್ಟರ್ ಮೈಂಡ್ ಈ ರಾಜ್ ಕುಂದ್ರ”  – ಮಾದಕ ನಟಿ ಪೂನಂ

ಇದೀಗ ಸ್ಯಾಂಡಲ್ ವುಡ್ ನ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರ ಅಭಿನಯದ ಹೈ ಲೀ ಎಕ್ಸ್ ಪೆಕ್ಟೆಡ್ ಸಿನಿಮಾವಾದ ಸಲಾರ್ ಕೂಡ ರಿಲೀಸ್ ದಿನಾಂಕವನ್ನ ಬಹಿರಂಗಪಡಿಸಿದೆ.. ವಿಜಯ್  ಅವರ ಚೊಚ್ಚಲ ನಿರ್ದೇಶನದ  ಹಾಗೂ ತಾವೇ ನಟಿಸಿರುವ ಆಕ್ಷನ್ ಥ್ರಿಲ್ಲರ್ ‘ಸಲಗ’ ಸಿನಿಮಾ ವರಲಕ್ಷ್ಮಿ ಹಬ್ಬಕ್ಕೆ ತೆರೆಮೇಲೆ ಬರುತ್ತಿದೆ..  ಈಗ ಸಿಕ್ಕಿರುವ ಮಾಹಿತಿಯಂತೆ   ಆಗಸ್ಟ್ 21 ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ  ಅಥವ ಅದಕ್ಕೂ ಮುಂಚೆಯೇ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗ್ತಾಯಿದೆ.. ಆದ್ರೆ ಆಗಲೂ 100% ಸೀಟಿಂಗ್ ಅನುಮತಿ ಸಿಗದೇ ಇದ್ರೆ ಸಿನಿಮಾ ರಿಲೀಸ್ ಆಗದೇ ಇದ್ದು, ಮತ್ತೆ ಪೋಸ್ಟ್ ಪೋನ್ ಆಗುವ ಸಾಧ್ಯತೆಯೂ ಇದೆ..

“ ರಾಜ್‌ ಕುಂದ್ರಾ ನನಗೆ ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಕೇಳಿದ್ದರು, ಈತ ಜೈಲಿನಲ್ಲಿಯೇ ಕೊಳೆಯಲಿ ” – ಯೂಟ್ಯೂಬ್ ಸ್ಟಾರ್

ಆದ್ರೆ ಇದುವರೆಗೂ ಅಧಿಕೃತವಾಗಿ  ಮಾಹಿತಿ ಹೊರಬಿದ್ದಿಲ್ಲ.. ದುನಿಯಾ ವಿಜಯ್ ನಟಿಸಿರುವ ನಿರ್ದೇಶಿಸಿರುವ ಈ ಚಿತ್ರವನ್ನು ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ತಿದ್ಧಾರೆ. ಇನ್ನೂ  ಭಜರಂಗಿ 2 , ಸಲಗ ಬಿಟ್ಟರೆ ರಿಲೀಸ್ ಗೆ ರೆಡಿಯಾಗಿ ಕಾಯುತ್ತಿರುವ ಬಹುನಿರೀಕ್ಷೆ ಸಿನಿಮಾಗಳಲ್ಲಿ  ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಅದಕ್ಕೂ ಮುನ್ನ ಕೋಟಿಗೊಬ್ಬ 3, ಭಾರತೀಯ ಸಿನಿಮಾರಂಗವೇ ಕಾತರದಿಂದ ಕಾಯುತ್ತಿರುವ KGF 2 , ಬೇರೆ ಭಾಷೆಗಳ ಸಿನಿಮಾಗಳಾದ ರಾಧೆ ಶ್ಯಾಮ್ , ಪುಷ್ಪ ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳು ರಿಲೀಸ್ ಗಾಗಿ ಕಾಯುತ್ತಿವೆ.

ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಭಜರಂಗಿ-2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ – ಅಧಿಕೃತ ಘೋಷಣೆ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd