ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ, ಮರ್ಯಾದೆ ಉಳಿಸೋದ್ರಲ್ಲಿ ಅರ್ಥವಿಲ್ಲ, ಸತ್ಯ ಗೊತ್ತಾಗಲೇ ಬೇಕಿದೆ – ಉಮಾಪತಿ
ಬೆಂಗಳೂರು: ಸ್ಯಾಂಡವುಡ್ ನಲ್ಲಿ ಸಂಚನಲ ಸೃಷ್ಟಿ ಮಾಡಿರುವ 25 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ಉಮಾಪತಿ , ಆರೋಪಿ ಅರುಣಕುಮಾರಿ ಸ್ಪೋಟಕ ಮಾಹಿತಿಗಳನ್ನ ಹೊರ ಹಾಕ್ತಲೇ ಇದ್ದು, ಕೆಲ ಆಡಿಯೋಗಳು ರಿಲೀಸ್ ಆಗಿವೆ.. ಪ್ರಕರಣಕ್ಕೆ ಟಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇದೀಗ ಬೆಂಗಳೂರಿನಲ್ಲಿಂದು ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ಮಾಪಕ ಉಮಾಪತಿ ದರ್ಶನ್ ಸ್ನೇಹಿತರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವಂಚನೆ ಪ್ರಕರಣ : ದರ್ಶನ್ ಪರ ನಿಂತ ಸಂಸದೆ ಸುಮಲತಾ
ನಾನು ದಡ್ಡ ಒಪ್ಪಿಕೊಳ್ತೇನೆ. ಆದರೆ 25 ಕೋಟಿ ರೂಪಾಯಿ ವ್ಯವಹಾರದಲ್ಲಿ ನೀವು ಹೇಗೆ ಯಾಮಾರಿದ್ರಿ. ನಿಮಗೆ ಇದರ ಬಗ್ಗೆ ಅನುಮಾನ ಮೂಡಲೇ ಇಲ್ಲವಾ. ಇಷ್ಟು ದಿನ ಕಳೆದರೂ ಮಲ್ಲೇಶ್ ರನ್ನ ನೀವೇಕೆ ಟ್ರೇಸ್ ಮಾಡಲಿಲ್ಲ. ಅರುಣಾ ಕುಮಾರಿಯನ್ನ ನೀವೇಕೆ ಬಿಟ್ಟು ಕಳಿಸಿದ್ದೀರಿ. ಎಂದು ಪ್ರಶ್ನೆ ಮಾಡಿದ್ದಾರೆ. ನನಗೆ ನಮ್ಮ ಪೊಲೀಸ್ ಮೇಲೆ ನಂಬಿಕೆ ಇದೆ. ದರ್ಶನ್ ಹಾಗೂ ನನ್ನ ನಡುವೆ ತಂದಿಡುವ ಕೆಲಸ ಮಾಡಲಾಗ್ತಾ ಇದೆ. ಅರುಣಾ ಕುಮಾರಿ ಹರ್ಷ ಮೆಲಂಟಾ ಜೊತೆ ಮಾತನಾಡುತ್ತಾಳೆ. ನನ್ನ ಹಾಗೂ ದರ್ಶನ್ ಜೊತೆ ಏಕೆ ಮಾತನಾಡೋದಿಲ್ಲ.
ಪ್ರಕರಣದಲ್ಲಿ ನನ್ನನ್ನ ಉಮಾಪತಿ ಬಳಸಿಕೊಂಡಿದ್ದಾರೆ : ಅರುಣಾ ಕುಮಾರಿ
ಬೆಂಗಳೂರು ಪೊಲೀಸರ ಮೇಲೆ ರಾಕೇಶ್ ಪಾಪಣ್ಣಗೆ ನಂಬಿಕೆ ಇಲ್ಲವಂತೆ. ಹೀಗಾಗಿ ಮೈಸೂರಿನಲ್ಲಿ ದೂರು ನೀಡಿದ್ದಾರಂತೆ. ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ. ಇನ್ನು ಮರ್ಯಾದೆ ಉಳಿಯೋದು ಏನಿಲ್ಲ. ಈ ಪ್ರಕರಣ ಇಷ್ಟು ಬಹಿರಂಗವಾದ ಮೇಲೆ ಕಾನೂನಿನ ಅಡಿಯಲ್ಲೇ ಪರಿಹಾರ ಹುಡುಕೋಣ. ಈ ಪ್ರಕರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ನನಗೆ ಏಪ್ರಿಲ್ ನಿಂದಲೇ ಅರುಣಾಕುಮಾರಿಯ ಪರಿಚಯವಾಗಿತ್ತು. ಪ್ರಾಪರ್ಟಿ ವಿಚಾರವಾಗಿ ಆಕೆಯ ಪರಿಚಯವಾಗಿತ್ತು. ದರ್ಶನ್ ಸರ್ ಹೆಸರು ಕೇಳಿದ್ದರಿಂದ ನಾನು ಆಧಾರ್ ಕಾರ್ಡ್ ಫೋಟೋ ಕಳಿಸಿದ್ದೆ. ನನ್ನ ಮೇಲೆ ಆರೋಪ ಬಂದಿದೆ ನಾನು ಸಾಬೀತು ಮಾಡಲೇಬೇಕು ಎಂದು ಹೇಳಿದ್ರು.