100 ಕೋಟಿ ರೂಪಾಯಿ ಬಾಚಿದ ‘ಬಾಕ್ಸ್ ಆಫೀಸ್ ಸುಲ್ತಾನ’
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ರಿಲೀಸ್ ಆಗಿ ಈವರೆಗೂ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ. ಈ ಮೂಲಕ ಬಾಕ್ಸ್ ಆಫೀಸ್ ಸುಲ್ತಾನ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಈ ಸಿನಿಮಾ ಈವರೆಗೂ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ರಾಬರ್ಟ್ ಸಿನಿಮಾ ಮೊದಲ ದಿನವೇ 17.24 ಕೋಟಿ ರೂ. ಕಲೆಕ್ಷನ್ ಮಾಡಿತ್ತು. 2ಡನೇ ದಿನ 12.78 ಕೋಟಿ, 3ನೇ ದಿನ 14.10 ಕೋಟಿ ರೂ., 4ನೇ ದಿನ ಬರೋಬ್ಬರಿ 15.68 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ರಾಬರ್ಟ್ ಬಿಡುಗಡೆಯಾಗಿ 20 ದಿನ ಕಳೆದಿದೆ. ಈ ಸಿನಿಮಾ 20ನೇ ದಿನಕ್ಕೆ 100 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸ್ಯಾಂಡಲ್ವುಡ್ ಇತಿಹಾಸದಲ್ಲೇ ಇಂಥ ಸಾಥನೆ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ರಾಬರ್ಟ್ ಪಾತ್ರವಾಗಿದೆ.
ಚಂದು ಪಾಲಿಗೆ ರಿಯಲ್ ಲೈಫ್ ನಲ್ಲಿ ‘ಲಕ್ಷ್ಮಿ’ಯಾದ ಕವಿತಾ..!